ಸಾಮಾನ್ಯವಾಗಿ ಖಾಲಿ ರಸ್ತೆಯಲ್ಲಿ ಸ್ಕೇಟಿಂಗ್ ಮಾಡಲಾಗುತ್ತದೆ. ಆದರೆ ಕೊಯಮತ್ತೂರಿನಲ್ಲಿ ವಿದೇಶಿಗನೊಬ್ಬ ಬಸ್ ಹಿಡಿದುಕೊಂಡು ರಸ್ತೆಯಲ್ಲಿ ಸ್ಕೇಟಿಂಗ್ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಹಜವಾಗಿ ಇದು ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ ಎಂದು ಹೇಳಬೇಕಾಗಿಲ್ಲ. ಪ್ರಮುಖ ಪ್ರವಾಸಿ ತಾಣಗಳನ್ನು ವಿಮಾನ ನಿಲ್ದಾಣದಿಂದ ಸಂಪರ್ಕಿಸುವ ಅವಿನಾಶಿ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿದೇಶಿ ಪ್ರಜೆಯು ಕ್ಯಾಬ್ ಸವಾರಿಯನ್ನು ಬಿಟ್ಟು ತನ್ನ ಸ್ಕೇಟ್ಬೋರ್ಡ್ನಲ್ಲಿ ತಾನು ತಲುಪಬೇಕಾದ ಸ್ಥಳವನ್ನು ಮುಟ್ಟಲು ಈ ಆಯ್ಕೆ ಆರಿಸಿಕೊಂಡ. ದಾರಿಯಲ್ಲಿ ಬರುತ್ತಿದ್ದ ಬಸ್ಸಿನ ಹಿಂಬದಿಯ ಏಣಿಯನ್ನು ಹಿಡಿದು ನಿಂತಿದ್ದರಿಂದ ಅವನು ಅನಾಯಾಸವಾಗಿ ರಸ್ತೆಯ ಮೇಲೆ ಸ್ಕೇಟಿಂಗ್ ಮಾಡಿದ್ದಾನೆ.
ಈ ರೀತಿಯ ಸಾರಿಗೆಯ ಆಯ್ಕೆಯು ಇಬ್ಬರು ಬೈಕರ್ಗಳ ಗಮನ ಸೆಳೆಯಿತು. ಅವರು ಬಸ್ ಹಿಡಿದುಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ಸ್ಕೇಟರ್ನ ಪ್ರಯತ್ನವನ್ನು ರೆಕಾರ್ಡ್ ಮಾಡಿದರು. ಅಲ್ಲದೇ ಅವರಿಬ್ಬರ ಚರ್ಚೆ ಕೂಡ ರೆಕಾರ್ಡ್ ಆಗಿದೆ. ಸ್ಕೇಟರ್ ಬಗ್ಗೆ ಕಾಳಜಿ ತೋರುವುದೂ ಗೊತ್ತಾಗುತ್ತದೆ.