alex Certify ವೃದ್ಧನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗಲೇ ಬಂದೆರಗಿತ್ತು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧನ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗಲೇ ಬಂದೆರಗಿತ್ತು ಸಾವು

ಇತ್ತೀಚೆಗೆ ಬೆಂಗಳೂರಿನ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಬೆಡ್ ಶೀಟ್ ನಲ್ಲಿ ಸುತ್ತಿದ್ದ ವೃದ್ಧರೊಬ್ಬರ ಮೃತ ದೇಹ ಜೆಪಿ ನಗರ 6ನೇ ಹಂತದ ಬಳಿ ಪತ್ತೆಯಾಗಿತ್ತು. ಬಳಿಕ ಮೃತ ವ್ಯಕ್ತಿ 67 ವರ್ಷದ ಬಾಲಸುಬ್ರಮಣಿಯನ್ ಎಂದು ತಿಳಿದು ಬಂದಿದ್ದು, ತಮ್ಮ ಮೊಮ್ಮಗನನ್ನು ಬ್ಯಾಡ್ಮಿಂಟನ್ ಕ್ಲಾಸ್ ಗೆ ಬಿಟ್ಟು ಬರಲು ಹೋಗಿದ್ದ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.

ಇದೀಗ ಈ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬಾಲಸುಬ್ರಮಣಿಯನ್ ತಮ್ಮ ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗ ಹೃದಯಾಘಾತದಿಂದ ಸಾವನ್ನಪ್ಪಿರುವುದು ಈಗ ಬೆಳಕಿಗೆ ಬಂದಿದೆ. ಮೊಮ್ಮಗನನ್ನು ಬಿಟ್ಟ ನಂತರ ಅವರು ಮನೆ ಕೆಲಸದಾಕೆ ಮನೆಗೆ ಹೋಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಹೃದಯಾಘಾತವಾಗಿದೆ. ಇದರ ಪರಿಣಾಮ ತಕ್ಷಣವೇ ಸಾವಿಗೀಡಾಗಿದ್ದಾರೆ.

ಆದರೆ ಇದರಿಂದ ತನ್ನ ಮೇಲೆ ಎಲ್ಲಿ ಕೊಲೆ ಆರೋಪ ಬರುವುದೋ ಎಂಬ ಹೆದರಿಕೆಯಿಂದ ಮನೆ ಕೆಲಸದಾಕೆ ಪತಿಯ ಸಹಾಯದಿಂದ ಮೃತ ದೇಹವನ್ನು ಬೆಡ್ ಶೀಟ್ ನಲ್ಲಿ ಸುತ್ತಿ ಜೆಪಿ ನಗರದ 6ನೇ ಹಂತದಲ್ಲಿ ಎಸೆದಿದ್ದರು ಎನ್ನಲಾಗಿದೆ. ಬಾಲಸುಬ್ರಮಣಿಯನ್ ಮೊಬೈಲ್ ಡೀಟೇಲ್ಸ್ ಚೆಕ್ ಮಾಡಿದಾಗ ಮನೆ ಕೆಲಸದಾಕೆಯೊಂದಿಗೆ ಅವರು ನಿರಂತರ ಸಂಪರ್ಕದಲ್ಲಿರುವುದು ಕಂಡು ಬಂದ ಬಳಿಕ ಆಕೆಯನ್ನು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಸತ್ಯ ಸಂಗತಿ ಬೆಳಕಿಗೆ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...