ಶುಭ ಸಮಾರಂಭಗಳಲ್ಲಿ ಪೂಜನೀಯ ಸ್ಥಾನ ಪಡೆದುಕೊಳ್ಳುವ ವೀಳ್ಯದೆಲೆಯ ಸೇವನೆಯಿಂದ ಹತ್ತು ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ವೀಳ್ಯದೆಲೆಯನ್ನು ಊಟದ ಬಳಿಕ ಸೇವಿಸುವ ಪದ್ಧತಿಯಿದ್ದು, ಇದರಿಂದ ತಿಂದ ಆಹಾರ ಬಹುಬೇಗ ಜೀರ್ಣವಾಗುತ್ತದೆ.
ವೀಳ್ಯದೆಲೆ ರಸ ತೆಗೆದು ತುಸು ಜೇನುತುಪ್ಪ ಬೆರೆಸಿ ಮಕ್ಕಳಿಗೆ ಕುಡಿಯಲು ಕೊಟ್ಟರೆ ಶೀತ, ಜ್ವರದಂಥ ಸಮಸ್ಯೆಗಳು ದೂರವಾಗುತ್ತವೆ. ನಿಯಮಿತವಾಗಿ ಇದನ್ನು ಸೇವಿಸುತ್ತಾ ಬಂದರೆ ಮಧುಮೇಹದ ಸಮಸ್ಯೆಯೂ ದೂರವಾಗುತ್ತದೆ ಎನ್ನಲಾಗಿದೆ.
ವೀಳ್ಯದೆಲೆ ರಸದೊಂದಿಗೆ ಹಾಲು ಕುಡಿಯುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ದೂರವಾಗುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಅಂಶ ದೇಹಕ್ಕೆ ಅತ್ಯಗತ್ಯವಾಗಿದ್ದು, ಬಾಣಂತಿಯರಿಗೆ ನಿತ್ಯ ಇದನ್ನು ತಿನ್ನಲು ಕೊಡಲಾಗುತ್ತದೆ. ಈ ಮೂಲಕ ಮತ್ತೆ ಕಳೆದು ಹೋದ ಶಕ್ತಿ ಪಡೆದುಕೊಳ್ಳಬಹುದು, ಹಾಗೂ ಮೂಳೆಗಳನ್ನು ಗಟ್ಟಿಗೊಳಿಸಬಹುದು.
ಗರ್ಭಿಣಿಯರು ವಾಂತಿ ಬರುವ ಸಮಯದಲ್ಲಿ, ಬಿಕ್ಕಳಿಕೆ ಬರುವಾಗ ವೀಳ್ಯದೆಲೆಗೆ ಅಡಿಕೆ ಚೂರು ಸೇರಿಸಿ, ಚಿಟಿಕೆ ಏಲಕ್ಕಿ ಪುಡಿ ಉದುರಿಸಿ ಸೇವಿಸಿದರೆ ಎಲ್ಲಾ ಸಮಸ್ಯೆ ಗುಣವಾಗುತ್ತದೆ.