ಕೊರೋನಾ 2 ನೇ ಅಲೆ ರಾಜ್ಯದ ಜನರನ್ನು ಇನ್ನಿಲ್ಲದಂತೆ ಕಾಡಿತ್ತು. ದೊಡ್ಡ ಪ್ರಮಾಣದಲ್ಲಿ ಸಾವು -ನೋವು ಸಂಭವಿಸಿದ್ದು, ಇದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಬರೋಬ್ಬರಿ 50 ದಿನಗಳಿಗೂ ಅಧಿಕ ಕಾಲ ಲಾಕ್ ಡೌನ್ ವಿಧಿಸಿತ್ತು. ಇದೀಗ ಕೊರೊನಾ ಆರ್ಭಟ ಕಡಿಮೆಯಾಗಿದ್ದು, ಆದರೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ.
ಕೊರೊನಾ ಅಬ್ಬರ ತಗ್ಗಿರುವ ಕಾರಣ ರಾಜ್ಯ ಸರ್ಕಾರ ಲಾಕ್ಡೌನ್ ತೆರವುಗೊಳಿಸಿದ್ದು, ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಹಳಷ್ಟು ಮಂದಿ ಕೊರೊನಾ ಭೂಮಂಡಲದಿಂದಲೇ ನಿರ್ಗಮಿಸಿದೆಯೇನೋ ಎಂಬ ಭಾವನೆಯಲ್ಲಿ ವರ್ತಿಸುತ್ತಿದ್ದಾರೆ. ಕರೋನಾ ಎರಡನೇ ಅಲೆಯಲ್ಲಿ ಸಂಭವಿಸಿದ ಸಾವು ನೋವುಗಳನ್ನು ಸಂಪೂರ್ಣವಾಗಿ ಮರೆತಂತೆ ಕಾಣುತ್ತಿದೆ.
ಉದ್ಯೋಗಿಗಳಿಗೆ EPFO ಗುಡ್ ನ್ಯೂಸ್: ತುರ್ತು ಚಿಕಿತ್ಸೆಗೆ ಒಂದೇ ದಿನದಲ್ಲಿ ಒಂದು ಲಕ್ಷ ರೂ. ಅಡ್ವಾನ್ಸ್
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಕೆಲವರು ತಿರುಗಾಡುತ್ತಿದ್ದು ಇತರಿಗೂ ಕಂಟಕಪ್ರಾಯವಾಗಿ ಪರಿಣಮಿಸುತ್ತಿದ್ದಾರೆ. ಅದರಲ್ಲೂ ವಾರದ ರಜಾ ದಿನಗಳಾದ ಶನಿವಾರ, ಭಾನುವಾರ ಪ್ರವಾಸಿ ಸ್ಥಳಗಳು ತುಂಬಿ ತುಳುಕಾಡುತ್ತಿದ್ದು, ಸಾಮಾಜಿಕ ಅಂತರ ಎಂಬುದು ದುರ್ಬೀನು ಹಾಕಿ ಹುಡುಕಿದರೂ ಕಾಣದಂತಾಗಿದೆ. ಕೊರೊನಾ 2ನೇ ಅಲೆ ಇನ್ನೂ ಇರುವ ಮಧ್ಯೆ ಮೂರನೇ ಅಲೆಯ ಭೀತಿಯೂ ಕಾಡುತ್ತಿದೆ. ಇದರ ಮಧ್ಯೆ ಬಹುತೇಕರ ವರ್ತನೆ ನಿಜಕ್ಕೂ ಆತಂಕ ತರಿಸುವಂತಿದೆ.