alex Certify ವೀಕೆಂಡ್ ಕರ್ಫ್ಯೂ ಹೆಸರಲ್ಲಿ ಸಚಿವರು, ಶಾಸಕರು ಡ್ರಾಮಾ ಮಾಡ್ತಿದ್ದಾರೆ; ರೈಲು ಓಡಾಡಿದ್ರೆ ವೈರಸ್ ಓಡಾಡಲ್ವ…? ನಿವೃತ್ತ IAS ಅಧಿಕಾರಿ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀಕೆಂಡ್ ಕರ್ಫ್ಯೂ ಹೆಸರಲ್ಲಿ ಸಚಿವರು, ಶಾಸಕರು ಡ್ರಾಮಾ ಮಾಡ್ತಿದ್ದಾರೆ; ರೈಲು ಓಡಾಡಿದ್ರೆ ವೈರಸ್ ಓಡಾಡಲ್ವ…? ನಿವೃತ್ತ IAS ಅಧಿಕಾರಿ ಆಕ್ರೋಶ

ಬೆಂಗಳೂರು: ಒಂದೇ ಸಮನೇ ಹೆಚ್ಚುತ್ತಿರುವ ಕೊರೊನಾ ಸೋಂಕು, ಒಮಿಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಆದರೆ ಸರ್ಕಾರದ ಕ್ರಮದ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕುತ್ತಿದ್ದು, ಅನಗತ್ಯವಾಗಿ ಓಡಾಡುತ್ತಿರುವವರ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಕ್ರಮವನ್ನು ಖಂಡಿಸಿರುವ ನಿವೃತ್ತ ಐಎಎಸ್ ಅಧಿಕಾರಿ ಪೃಥ್ವಿರಾಜ್, ಸಚಿವರು, ಶಾಸಕರು, ವಿಪಕ್ಷ ನಾಯಕರು ಎಲ್ಲರೂ ಡ್ರಾಮಾ ಮಾಡುತ್ತಿದ್ದಾರೆ. ದೇಶದಲ್ಲಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಕಿಡಿಕಾರಿದ್ದಾರೆ.

ವೀಕೆಂಡ್ ಕರ್ಫ್ಯೂ ಎಂದು ಇಲ್ಲಿ ಜನ ಸಂಚಾರಕ್ಕೆ ತೊಂದರೆಯುಂಟು ಮಾಡುತ್ತಿದ್ದಾರೆ. ಅಲ್ಲಿ ದೇಶಾದ್ಯಂತ ರೈಲು ಓಡಾಟ ನಡೆಸಿದೆ, ವೈರಸ್ ಓಡಾಡಲ್ವಾ? ವೈರಸ್ ಎಂದು ರಸ್ತೆಯಲ್ಲಿ ನಿಂತು ಸಾರ್ವಜನಿಕರಿಗೆ ತೊಂದರೆ ಕೊಡುವುದು ಎಷ್ಟು ಸರಿ? ರೈಲು, ಬಸ್, ವಿಮಾನ ಓಡಾಟಕ್ಕೆ ಬಿಟ್ಟು ಇಲ್ಲಿ ಬಂದು ನಾಟಕವಾಡುತ್ತಿದ್ದಾರೆ. ಸಾವಿರಾರು ಜನ ಕೆಲಸ ಮಾಡುವ ಐಟಿ ಬಿಟಿಗಳಿಗೆ, ಇನ್ನಾವುದೋ ಕಚೇರಿಗಳಿಗೆ ಇಲ್ಲದ ಕೊರೊನಾ ರಸ್ತೆಯಲ್ಲಿ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ವೈರಸ್ ಎಂದು ಈ ರೀತಿ ಸಾರ್ವಜನಿಕರ ಓಡಾಟಕ್ಕೆ ತಡೆ ನೀಡುವುದು ಸರಿಯಲ್ಲ. ಇದರಿಂದ ಜನಜೀವನಕ್ಕೆ ತೊಂದರೆಯಾಗುತ್ತಿದೆ. ಪೊಲೀಸ್ ಅಧಿಕಾರಿಗಳಿಗೂ ಸರ್ಕಾರದ ನಿಯಮ ಇಷ್ಟವಾಗುತ್ತಿಲ್ಲ. ಆದರೆ ಸಂಬಳ ಕೊಡುತ್ತಿದ್ದಾರಲ್ಲ ಎಂಬ ಕಾರಣಕ್ಕೆ ಅವರು ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದಾರೆ. ಹಲವರ ಸ್ಥಿತಿಯೂ ಇದೇ ಆಗಿದೆ. ಆದರೆ ಸರ್ಕಾರಗಳು ಮಾತ್ರ ರೂಲ್ಸ್ ಹೆಸರಲ್ಲಿ ಡ್ರಾಮಾ ಮಾಡುತ್ತಿದೆ ಎಂದು ಗುಡುಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...