alex Certify ‘ವಿಶ್ವ ಯೋಗ ದಿನಾಚರಣೆ’ ದಿನದಂದು ಶಾಲೆಗಳಲ್ಲಿ ಒಂದೂವರೆ ಗಂಟೆ ಯೋಗಾಸನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಿಶ್ವ ಯೋಗ ದಿನಾಚರಣೆ’ ದಿನದಂದು ಶಾಲೆಗಳಲ್ಲಿ ಒಂದೂವರೆ ಗಂಟೆ ಯೋಗಾಸನ

ಜೂನ್ 21 ರಂದು ನಡೆಯುವ ವಿಶ್ವ ಯೋಗ ದಿನಾಚರಣೆ ರಾಜ್ಯದಾದ್ಯಂತ ಸಿದ್ಧತೆಗಳು ಜೋರಾಗಿ ನಡೆದಿದೆ. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಯೋಗಾಸನ ಮಾಡಲಿದ್ದಾರೆ.

ಇದರ ಮಧ್ಯೆ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಶಾಲೆಗಳಲ್ಲೂ ಯೋಗ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜೂನ್ 21ರ ಶನಿವಾರದಂದು ವೇಳಾಪಟ್ಟಿಯಂತೆ ಅರ್ಧ ದಿನ ಶಾಲೆ ನಡೆಸಬೇಕಾಗಿದ್ದು, ಮೊದಲ ಒಂದೂವರೆ ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾದ ಯೋಗಾಸನ ಪ್ರದರ್ಶನ ಹಮ್ಮಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

BIG NEWS: ಮತದಾರರಿಗೆ ಮುಖ್ಯ ಮಾಹಿತಿ: ವೋಟರ್ ಐಡಿಗೆ ಆಧಾರ್ ಜೋಡಣೆಗೆ ಆದೇಶ

ವಿಶ್ವ ಯೋಗ ದಿನಾಚರಣೆಯಂದು ಅರ್ಧ ದಿನ ಶಾಲೆ ನಡೆಸಿ ಇದರ ಬದಲಿಗೆ ಜೂನ್ 25 ಶನಿವಾರದಂದು ಪೂರ್ಣ ದಿವಸ ಶಾಲೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರವಾನಿಸಿರುವ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...