ಇಸ್ರೇಲ್ನಲ್ಲಿ ಬೆಳೆಯಲಾದ ಬರೋಬ್ಬರಿ 289 ಗ್ರಾಂ ತೂಕದ ಸ್ಟ್ರಾಬೆರ್ರಿ ಹಣ್ಣು ವಿಶ್ವದ ಅತ್ಯಂತ ದೊಡ್ಡ ಸ್ಟ್ರಾಬೆರ್ರಿ ಎಂಬ ಖ್ಯಾತಿಯನ್ನು ಸಂಪಾದಿಸುವ ಮೂಲಕ ವಿಶ್ವ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ನೋಂದಾಯಿಸಿದೆ.
18 ಸೆಂಟಿಮೀಟರ್ ಉದ್ದ ಹಾಗೂ ನಾಲ್ಕು ಸೆಂಟಿಮೀಟರ್ ದಪ್ಪ, 34 ಸೆಂಟಿ ಮೀಟರ್ ವ್ಯಾಸವನ್ನು ಹೊಂದಿರುವ ಈ ಸ್ಟ್ರಾಬೆರ್ರಿಯನ್ನು ಏರಿಯಲ್ ಚಹಿಯಲ್ಲಿ ಬೆಳೆಯಲಾಗಿದೆ.
ಈ ಸ್ಟ್ರಾಬೆರ್ರಿಯು ಇಲಾನ್ ವಿಭಾಗಕ್ಕೆ ಸೇರಿದೆ. ಇಸ್ರೆಲ್ನ ಕಡಿಮಾ – ಜೋರಾನ್ನಲ್ಲಿ ಇದನ್ನು ಬೆಳೆಯಲಾಗಿದೆ.
ಜನವರಿ ಅಂತ್ಯದಿಂದ ಫೆಬ್ರವರಿ ಆರಂಭದಲ್ಲಿ ಸಾಮಾನ್ಯವಾಗಿ ಶೀತ ಹವಾಮಾನ ಇರುತ್ತದೆ. ಈ ಸ್ಟ್ರಾಬೆರ್ರಿಯು ಇಷ್ಟು ದೊಡ್ಡ ಗಾತ್ರದಲ್ಲಿ ಬೆಳೆಯಲು ಸರಿ ಸುಮಾರು 45 ದಿನಗಳನ್ನು ತೆಗೆದುಕೊಂಡಿದೆ ಎಂದು ಗಿನ್ನೆಸ್ ವಿಶ್ವ ದಾಖಲೆಗೆ ಡಾ. ನಿರ್ ದಾಯ್ ಮಾಹಿತಿ ನೀಡಿದರು.
ಈ ಹಿಂದೆ 250 ಗ್ರಾಂ ತೂಕದ ಸ್ಟ್ರಾಬೆರ್ರಿ ವಿಶ್ವದ ಅತ್ಯಂತ ದೊಡ್ಡ ಸ್ಟ್ರಾಬೆರ್ರಿ ಎಂಬ ಖ್ಯಾತಿಯನ್ನು ಸಂಪಾದಿಸಿತ್ತು. ಜಪಾನ್ನಲ್ಲಿ 2015ರ ಜನವರಿ 28ರಂದು ಈ ದಾಖಲೆಯನ್ನು ಸೃಷ್ಟಿಸಲಾಗಿತ್ತು. ಆದರೆ ಇದೀಗ ಈ ದಾಖಲೆಯನ್ನು ಇಸ್ರೇಲ್ನ ಸ್ಟ್ರಾಬೆರ್ರಿ ಮುರಿದಿದೆ.