alex Certify ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡ ಪೂರೈಸುವಲ್ಲಿ ಭಾರತದ ನಗರಗಳು ವಿಫಲ: ಮಿತಿ ಮೀರಿದ ವಾಯು ಮಾಲಿನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡ ಪೂರೈಸುವಲ್ಲಿ ಭಾರತದ ನಗರಗಳು ವಿಫಲ: ಮಿತಿ ಮೀರಿದ ವಾಯು ಮಾಲಿನ್ಯ

ಸ್ವಿಸ್​ ಸಂಸ್ಥೆಯಾದ IQAir ವಿಶ್ವದ ವಾಯು ಗುಣಮಟ್ಟದ ವರದಿ ನೀಡಿದ್ದು, ಇದರಲ್ಲಿ ಕಳೆದ ವರ್ಷ ಭಾರತದಲ್ಲಿ ವಾಯು ಮಾಲಿನ್ಯವು ಮಿತಿಮೀರಿದೆ ಎಂದು ತಿಳಿದುಬಂದಿದೆ.

ಸೂಕ್ಷ್ಮದರ್ಶಕ PM2.5 ಮಾಲಿನ್ಯಕಾರಕದಲ್ಲಿ ಅಳೆಯಲಾದ ಸರಾಸರಿ ವಾಯು ಮಾಲಿನ್ಯವು ಪ್ರತಿ ಘನ ಮೀಟರ್‌ಗೆ 58.1 ಮೈಕ್ರೊಗ್ರಾಮ್ ಆಗಿದೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ವಾಯು ಗುಣಮಟ್ಟದ ಮಾರ್ಗಸೂಚಿಗಳಿಗಿಂತ 10 ಪಟ್ಟು ಹೆಚ್ಚಾಗಿದೆ. ಭಾರತದ ಯಾವುದೇ ನಗರವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನು ಪೂರೈಸುವಲ್ಲಿ ಯಶಸ್ವಿಯಾಗಿಲ್ಲ.

ಉತ್ತರ ಭಾರತದಲ್ಲಿ ವಾಯು ಮಾಲಿನ್ಯವು ತೀರಾ ಹದಗೆಟ್ಟಿದೆ. ದೆಹಲಿಯು ಸತತ ನಾಲ್ಕನೇ ವರ್ಷ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿದೆ. ಮಾಲಿನ್ಯ ಪ್ರಮಾಣವು 2020ಕ್ಕಿಂತ 15 ಪ್ರತಿಶತದಷ್ಟು ಹೆಚ್ಚಾಗಿದೆ.

ದೆಹಲಿಯು ವಾಯು ಮಾಲಿನ್ಯದಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನವನ್ನು ಪಡೆದಿದ್ದರೆ, ಇತ್ತ ರಾಜಸ್ಥಾನದ ಭಿವಾಡಿಯು ವಿಶ್ವದಲ್ಲೇ ಕೊಳಕು ನಗರ ಎನಿಸಿದೆ . ಇದಾದ ಬಳಿಕ ಉತ್ತರ ಪ್ರದೇಶದ ಘಾಜಿಯಾಬಾದ್​ ಇದ್ದು ಈ ಪ್ರದೇಶವು ದೆಹಲಿ ಗಡಿಯ ಸಮೀಪದಲ್ಲೇ ಇದೆ. ಟಾಪ್​ 15 ಕೊಳಕು ನಗರಗಳ ಪಟ್ಟಿಯಲ್ಲಿ 10 ನಗರಗಳು ರಾಷ್ಟ್ರ ರಾಜಧಾನಿಯ ಸಮೀಪದಲ್ಲಿಯೇ ಇವೆ.
ವಿಶ್ವದ 100 ಕಲುಷಿತ ಸ್ಥಳಗಳ ಪಟ್ಟಿಯಲ್ಲಿ 63 ನಗರಗಳು ಭಾರತದ್ದೇ ಆಗಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...