alex Certify ವಿಶ್ವಸಂಸ್ಥೆಯಲ್ಲಿ ರಷ್ಯಾಗೆ ಭಾರೀ ಮುಖಭಂಗ: ಐರೋಪ್ಯ ರಾಷ್ಟ್ರಗಳಿಂದ ರಷ್ಯಾ ವಿದೇಶಾಂಗ ಸಚಿವರ ಭಾಷಣಕ್ಕೆ ಬಹಿಷ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವಸಂಸ್ಥೆಯಲ್ಲಿ ರಷ್ಯಾಗೆ ಭಾರೀ ಮುಖಭಂಗ: ಐರೋಪ್ಯ ರಾಷ್ಟ್ರಗಳಿಂದ ರಷ್ಯಾ ವಿದೇಶಾಂಗ ಸಚಿವರ ಭಾಷಣಕ್ಕೆ ಬಹಿಷ್ಕಾರ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಭಾಷಣ ಮಾಡುವ ವೇಳೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ವಿ ಲಾವ್ರೋವ್​​ ಭಾರೀ ಮುಖಭಂಗವನ್ನು ಅನುಭವಿಸಿದ್ದಾರೆ. ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ವಿ ಲಾವ್ರೋವ್​​ ಭಾಷಣ ಶುರು ಮಾಡುವ ಮುನ್ನ ಸರಿ ಸುಮಾರು 100 ಮಂದಿ ರಾಜತಾಂತ್ರಿಕರು ಸಮ್ಮೇಳನದಿಂದ ಹೊರ ನಡೆದರು.

ವಿಶ್ವಸಂಸ್ಥೆಯಲ್ಲಿ ರಷ್ಯಾದ ವಿದೇಶಾಂಗ ಸಚಿವರು ಭಾಷಣವನ್ನು ಆರಂಭಿಸುತ್ತಿದ್ದಂತೆಯೇ ಯುರೋಪಿಯನ್​​ ಒಕ್ಕೂಟದ ರಾಷ್ಟ್ರದ ಪ್ರತಿನಿಧಿಗಳು ಸಭೆಯಿಂದ ಹೊರ ನಡೆಯುವ ಮೂಲಕ ಸೆರ್ಗ ವಿ ಲಾವ್ರೋವ್​​ರ ಭಾಷಣಕ್ಕೆ ಬಹಿಷ್ಕಾರವನ್ನು ಹಾಕಿದರು.

ಲಾವ್ರೋವ್​ ವಿಡಿಯೋ ಕಾನ್ಫರೆನ್ಸ್​ ಮೂಲಕ ಈ ಸಭೆಗೆ ಹಾಜರಾಗಿದ್ದರು. ಯುರೋಪಿಯನ್​ ದೇಶಗಳಿಗೆ ರಷ್ಯಾದ ವಿಮಾನ ಹಾರಾಟ ಬ್ಯಾನ್​ ಆಗಿರುವುದಿಂದ ಲಾವ್ರೋವ್​ಗೆ ನೇರವಾಗಿ ವಿಶ್ವಸಂಸ್ಥೆಯ ಸಭೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ರಷ್ಯಾ ವಿದೇಶಾಂಗ ಸಚಿವರು ಭಾಷಣ ಆರಂಭಿಸುತ್ತಿದ್ದಂತೆಯೇ ಐರೋಪ್ಯ ರಾಷ್ಟ್ರ ಒಕ್ಕೂಟಗಳ ವಿವಿಧ ಪ್ರತಿನಿಧಿಗಳು ಸಭೆಯಿಂದ ಹೊರ ನಡೆದ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

— U.S. Mission Geneva (@usmissiongeneva) March 1, 2022

https://twitter.com/i/status/1498663508371775495

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...