alex Certify ವಿಶ್ವದ ಅತಿ ಉದ್ದದ ‘ಗಂಗಾ ವಿಲಾಸ್’ ಕ್ರೂಸ್ ಪ್ರವಾಸ ಉದ್ಘಾಟನೆ; ಇಲ್ಲಿದೆ ಅದರ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿ ಉದ್ದದ ‘ಗಂಗಾ ವಿಲಾಸ್’ ಕ್ರೂಸ್ ಪ್ರವಾಸ ಉದ್ಘಾಟನೆ; ಇಲ್ಲಿದೆ ಅದರ ವಿಶೇಷತೆ

ವಿಶ್ವದ ಅತಿ ಉದ್ದದ ನದಿ ಕ್ರೂಸ್ ಪ್ರವಾಸ ಎಂಬ ಹೆಗ್ಗಳಿಕೆ ಹೊಂದಿರುವ ‘ಗಂಗಾ ವಿಲಾಸ್’ ಕ್ರೂಸ್ ಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿದ್ದಾರೆ. ವಾರಣಾಸಿಯಲ್ಲಿ ಇದರ ಉದ್ಘಾಟನೆ ನೆರವೇರಿದ್ದು, ಇದರ ವಿಶೇಷತೆ ಕುರಿತು ಮಾಹಿತಿ ಇಲ್ಲಿದೆ.

ಗಂಗಾ, ಬ್ರಹ್ಮಪುತ್ರ ಸೇರಿದಂತೆ 27 ನದಿಗಳಲ್ಲಿ ‘ಗಂಗಾ ವಿಲಾಸ್’ ಕ್ರೂಸ್ ಸಂಚರಿಸಲಿದ್ದು, ಒಟ್ಟು 3,200 ಕಿಲೋಮೀಟರ್ ಕ್ರಮಿಸಲಿದೆ. 51 ದಿನಗಳ ಕಾಲ ಈ ಐಷಾರಾಮಿ ಹಡಗಿನಲ್ಲಿ ಪ್ರಯಾಣ ಮಾಡಬೇಕಿದ್ದು, 50 ವಿವಿಧ ಆಕರ್ಷಕ ತಾಣಗಳನ್ನು ಸಂದರ್ಶಿಸಬಹುದಾಗಿದೆ.

ಈ ಹಡಗಿನಲ್ಲಿ ಒಂದು ಬಾರಿಗೆ 36 ಪ್ರವಾಸಿಗರು ಮಾತ್ರ ಪ್ರಯಾಣಿಸಬಹುದಾಗಿದ್ದು, ಪ್ರಯಾಣಿಕರಿಗೆ 12.50 ಲಕ್ಷ ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಗಂಗಾ ವಿಲಾಸ್ ಕ್ರೂಸ್ ನಲ್ಲಿ 18 ಐಷಾರಾಮಿ ಸೂಟ್ ಗಳಿದ್ದು, ಮೂರು ಡೆಕ್ ಗಳನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...