alex Certify ವಿಶ್ವದ ಅಕಾಲಿಕ ಅವಳಿ ಮಕ್ಕಳಿಗೀಗ ಒಂದು ವರ್ಷ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅಕಾಲಿಕ ಅವಳಿ ಮಕ್ಕಳಿಗೀಗ ಒಂದು ವರ್ಷ…..!

World's Most Premature Twins, Born 126 Days Early, Turn A Year Oldವಿಶ್ವದ ಅತ್ಯಂತ ಅಕಾಲಿಕ ಅವಳಿಗಳೆಂದು ವಿಶ್ವ ದಾಖಲೆ ಹೊಂದಿರುವ ಮಕ್ಕಳು ಒಂದು ವರ್ಷ ಪೂರೈಸಿದ್ದಾರೆ. ಕೆನಡಾದ ಒಂಟಾರಿಯೊದ ವಿಶ್ವದ ಅತ್ಯಂತ ಅಕಾಲಿಕ ಅವಳಿಗಳಾದ ಅಡಿಯಾ ಲೇಲಿನ್ ಮತ್ತು ಆಡ್ರಿಯಲ್ ಲುಕಾ ನಾಡರಾಜ ಅವರು ಈ ಜಗತ್ತಿಗೆ ಬಂದಾಗ ಸುದ್ದಿಯಲ್ಲಿದ್ದರು.

ಈ ಅವಳಿ ಮಕ್ಕಳು ಇತ್ತೀಚೆಗೆ ಮಾರ್ಚ್ 4, 2023 ರಂದು ಒಂದು ವರ್ಷಕ್ಕೆ ಕಾಲಿಟ್ಟಿದ್ದಾರೆ. ಸಾಮಾನ್ಯವಾಗಿ ಹೆರಿಗೆಯಾಗುವ 266 ದಿನಗಳ ಬದಲಾಗಿ 152 ದಿನಗಳ ಗರ್ಭಧಾರಣೆಯ ನಂತರ ಈ ಅವಳಿ ಮಕ್ಕಳು ಜನಿಸಿದ್ದವು. ಇದರಿಂದಾಗಿ ಈ ಅವಳಿಗಳು “ವಿಶ್ವದ ‘ಅತ್ಯಂತ ಅಕಾಲಿಕ ಅವಳಿಗಳು’ ಮತ್ತು ‘ಹುಟ್ಟಿದ ಸಮಯದಲ್ಲಿ ಅತ್ಯಂತ ಕಡಿಮೆ ತೂಕದ ಅವಳಿಗಳು’ ಎಂಬ ಬಿರುದನ್ನು ಹೊಂದಿದ್ದಾರೆ.

ಅವಳಿ ಮಕ್ಕಳ ತಾಯಿ ಶಕೀನಾ ರಾಜೇಂದ್ರಮ್ ಅವರು ಗರ್ಭಧಾರಣೆಯ ಕೇವಲ 21 ವಾರಗಳು ಮತ್ತು 5 ದಿನಗಳ ನಂತರ ಹೆರಿಗೆಗೆ ಒಳಗಾದರು. ಸಾಮಾನ್ಯವಾಗಿ ಹೆರಿಯಾಗುವ ನಾಲ್ಕು ತಿಂಗಳ ಮುಂಚೆಯೇ ಅವಳಿ ಮಕ್ಕಳು ಜನಿಸಿದ್ದರು. ಈ ವೇಳೆ ಮಕ್ಕಳು ಬದುಕುಳಿಯೋದು ಅಸಾಧ್ಯವೆಂದು ವೈದ್ಯರು ಹೇಳಿದ್ದರು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿದುಬಂದಿದೆ.

ಕೇವಲ 330 ಗ್ರಾಂ (0.72 lb) ತೂಕದ ಹೆಣ್ಣು ಮಗು ಆದಿಯಾ ತನ್ನ ಸಹೋದರ ಅಡ್ರಿಯಲ್ ಜನನಕ್ಕೂ 23 ನಿಮಿಷಗಳ ಮೊದಲು ಜನಿಸಿದಳು. ಜನನದ ವೇಳೆ ಅಡ್ರಿಯಲ್ 420 ಗ್ರಾಂ (0.92 lb) ಇದ್ದನಷ್ಟೇ. ಇಬ್ಬರೂ ಜನನದ ವೇಳೆ ಅತ್ಯಂತ ಹಗುರವಾದ ಅವಳಿಗಳಾಗಿದ್ದು ಇದು ಗಿನ್ನೆಸ್ ದಾಖಲೆ ಸೇರಿದೆ.

— Guinness World Records (@GWR) March 4, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...