ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾದ ರಕ್ಷಿತ್ ಶೆಟ್ಟಿ ತಮ್ಮ ಚಿತ್ರಗಳನ್ನು ನಿರ್ಮಾಣ ಮಾಡುವ ವೇಳೆ ಜನರ ನಾಡಿ ಮಿಡಿತವನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸುವವರು ಎಂಬ ಮಾತಿದೆ.
ರಕ್ಷಿತ್‌ರ ಮುಂದಿನ ಚಿತ್ರ ’777 ಚಾರ್ಲಿ’ಯ ನಿರ್ಮಾಣ ಮಾತ್ರವಲ್ಲದೇ ಮುಂಚೂಣಿ ನಟನ ಪಾತ್ರದಲ್ಲೂ ರಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ. ಏಕಕಾಲದಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ಸ್ಯಾನಿಟೈಸರ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ, 17 ಮಂದಿ ಸಾವು
ಚಿತ್ರದಲ್ಲಿ ನಾಯಿಗಳೊಂದಿಗೆ ನಟಿಸಿರುವ ರಕ್ಷಿತ್, ನಾಲ್ಕು ನಾಯಿಗಳೊಂದಿಗೆ ಇದಕ್ಕೆಂದೇ ಪಳಗಿದ್ದಾರೆ. ನಾಯಿಗಳು ದಣಿವಾದಾಗ ಅವಕ್ಕೆಂದೇ ಪೋರ್ಟಬಲ್ ಈಜು ಕೊಳವೊಂದನ್ನು ಚಿತ್ರೀಕರಣದ ಸೆಟ್‌ನಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ಹುಬ್ಬೇರಿಸುವಂತಿದೆ ಬೃಹತ್ ಟ್ರಕ್ ನಲ್ಲಿ ಪೊಲೀಸರು ತೆಗೆದುಕೊಂಡು ಹೋದ ವಾಹನ…!
ಏಕಾಂತವನ್ನು ಇಷ್ಟಪಡುವ ವ್ಯಕ್ತಿಯ ಪಾತ್ರದಲ್ಲಿ ರಕ್ಷಿತ್ ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕನ ಜೀವನದಲ್ಲಿ ನಾಯಿಯೊಂದು ಎಂಟ್ರಿ ಕೊಟ್ಟು, ಇಬ್ಬರ ನಡುವೆ ಬಾಂಡಿಂಗ್ ಹೇಗೆ ಬೆಳೆಯುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಲಾಗಿದೆ.
ಕೋವಿಡ್‌ನ ಮೊದಲನೇ ಅಲೆ ಸ್ವಲ್ಪ ಬಿಡುವು ಕೊಟ್ಟ ಬಳಿಕ ಕಾಶ್ಮೀರದಲ್ಲಿ ಚಿತ್ರದ ಒಂದು ಭಾಗವನ್ನು ಶೂಟಿಂಗ್ ಮಾಡಲಾಗಿದೆ. ಒಟ್ಟಾರೆಯಾಗಿ ಚಿತ್ರದ ನಿರ್ಮಾಣಕ್ಕೆ ಮೂರು ವರ್ಷಗಳು ಹಿಡಿದಿವೆ.