alex Certify ಕಣ್ಣಂಚನ್ನು ತೇವಗೊಳಿಸುತ್ತೆ ವಿಶಿಷ್ಟವಾಗಿ ʼವ್ಯಾಲೆಂಟೈನ್ಸ್​ ಡೇʼ ಆಚರಿಸಿದ ವಿದ್ಯಾರ್ಥಿನಿಯರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ವಿಶಿಷ್ಟವಾಗಿ ʼವ್ಯಾಲೆಂಟೈನ್ಸ್​ ಡೇʼ ಆಚರಿಸಿದ ವಿದ್ಯಾರ್ಥಿನಿಯರ ವಿಡಿಯೋ

ವ್ಯಾಲೆಂಟೈನ್ಸ್​ ದಿನ, ಪ್ರೇಮಿಗಳು ತಮ್ಮ ಜೀವನ ಸಂಗಾತಿ ಆಗಿರುವವರಿಗೆ ಹಾಗೂ ಮುಂದೆ ಆಗುವವರಿಗೆ ಪರಸ್ಪರ ಶುಭಾಶಯಗಳನ್ನು ತಿಳಿಸುವ ದಿನವಾಗಿದೆ. ಆದರೆ ಪ್ರೀತಿ ಎನ್ನುವುದು ಕೇವಲ ಗಂಡು – ಹೆಣ್ಣಿನ ನಡುವಿನ ಸಂಬಂಧ ಮಾತ್ರವಲ್ಲ, ಮಕ್ಕಳು-ಪೋಷಕರು, ಒಡಹುಟ್ಟಿದವರು, ಸ್ನೇಹಿತರು, ಸಹೋದ್ಯೋಗಿಗಳು ಹೀಗೆ ಎಲ್ಲರ ನಡುವೆಯೂ ಪ್ರೀತಿ ಇರುತ್ತದೆ ಎಂದರೆ ತಪ್ಪಾಗಲಾರದು.

ಶಾಲೆ ಅಂದಮೇಲೆ ಅಲ್ಲಿ ಗುರು – ಶಿಷ್ಯರ ನಡುವಿನ ಸಂಬಂಧ ಕೂಡ ಅಷ್ಟೇ ಅವಿನಾಭಾವವಾಗಿ ಇರುತ್ತದೆ. ನಮ್ಮ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಹೀಗಾಗಿ ಪಶ್ಚಿಮ ಬಂಗಾಳದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ಗುಂಪು ತಮ್ಮ ನೆಚ್ಚಿನ ಶಿಕ್ಷಕಿಯ ಜೊತೆಯಲ್ಲಿ ವ್ಯಾಲೆಂಟೈನ್ಸ್​ ಡೇ ಆಚರಿಸಿದೆ.

ಪ್ರೇಮಿಗಳ ದಿನವನ್ನು ಕೇವಲ ಪ್ರೇಮಿಗಳಿಗೆ ಮಾತ್ರ ಸೀಮಿತವಾಗಿರಿಸದ ಈ ವಿದ್ಯಾರ್ಥಿನಿಯರು ತಮ್ಮ ನೆಚ್ಚಿನ ಶಿಕ್ಷಕಿಯ ಮುಂದೆ ನಮಗೆ ನೀವೆಷ್ಟು ಪ್ರೀತಿ ಎಂಬುದನ್ನು ಹೇಳಿಕೊಂಡಿದ್ದಾರೆ. ಶಾಲೆಯ ಆವರಣಕ್ಕೆ ಶಿಕ್ಷಕಿಯನ್ನು ಕಣ್ಣು ಮುಚ್ಚಿ ಕರೆದುಕೊಂಡು ಬಂದ ವಿದ್ಯಾರ್ಥಿನಿಯರು ಬಳಿಕ ಮೊಣಕಾಲ ಮೇಲೆ ಕುಳಿತು ಶಿಕ್ಷಕಿಗೆ ಗುಲಾಬಿ ಹೂವನ್ನು ನೀಡಿದ್ದಾರೆ. ಅಲ್ಲದೇ ಶಿಕ್ಷಕಿ ತಮಗೇಕೆ ಇಷ್ಟೊಂದು ಇಷ್ಟ ಎಂದು ಹೇಳುತ್ತಾ ವಿದ್ಯಾರ್ಥಿನಿಯರು ಭಾವುಕರಾಗಿದ್ದು ಸಹ ಕಂಡು ಬಂತು. ವಿದ್ಯಾರ್ಥಿನಿಯರ ಈ ಪ್ರೀತಿಯನ್ನು ಕಂಡ ಶಿಕ್ಷಕಿ ಕಣ್ಣೀರಾಗಿದ್ದು ಮಾತ್ರವಲ್ಲದೇ ವಿದ್ಯಾರ್ಥಿನಿಯರನ್ನು ಬಿಗಿದಪ್ಪಿಕೊಂಡರು. ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯರ ನಡುವಿನ ಭಾಂದ್ಯವನ್ನು ತೋರಿಸುವ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...