
ವಿವೋ ಪ್ರೊ ಕಬಡ್ಡಿ ನಾಳೆ ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು ಮೊದಲನೆಯ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ಮುಖಾಮುಖಿಯಾಗಲಿದ್ದು ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ ಹಾಗೂ ತಮಿಳ್ ತಲೈವಾಸ್ ಸೆಣಸಾಡಲಿವೆ ಗೆದ್ದ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸುವ ಮೂಲಕ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಪೂಣೇರಿ ಪಲ್ಟನ್ ತಂಡವನ್ನು ಎದುರಿಸಲಿವೆ.
ಬೆಂಗಳೂರು ಬುಲ್ಸ್ ತಂಡ ಬಲಿಷ್ಠ ದಬಾಂಗ್ ಡೆಲ್ಲಿ ವಿರುದ್ಧ ಗೆಲ್ಲಲೇಬೇಕಾಗಿದೆ, ಬೆಂಗಳೂರು ಬುಲ್ಸ್ ನ ಭರವಸೆ ಆಟಗಾರರಾದ ಭರತ್, ನೀರಜ್ ನರ್ವಾಲ್, ಸೌರಭ ನಂದಾಲ್, ಅಮನ್ ಮೇಲೆ ಸಾಕಷ್ಟು ನಿರೀಕ್ಷೆ ಇದೆ ಇನ್ನು ದಬಾಂಗ್ ಡೆಲ್ಲಿಯ ಸ್ಟಾರ್ ರೈಡರ್ ನವೀನ್ ಎಕ್ಸ್ಪ್ರೆಸ್ ಅವರನ್ನು ಹೆಚ್ಚಾಗಿ ಹೊರಕಳಿಸಿದಷ್ಟು ಬೆಂಗಳೂರು ಬುಲ್ಸ್ ಗೆ ಗೆಲುವು ಸುಲಭವಾಗಬಹುದಾಗಿದೆ.
