alex Certify ವಿವೋ ಪ್ರೊ ಕಬಡ್ಡಿ 2022: ಇಂದು ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟಾನ್ಸ್ ಮುಖಾಮುಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವೋ ಪ್ರೊ ಕಬಡ್ಡಿ 2022: ಇಂದು ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟಾನ್ಸ್ ಮುಖಾಮುಖಿ

ವಿವೋ ಪ್ರೊ ಕಬಡ್ಡಿಯಲ್ಲಿ ಇಂದು ಬೆಂಗಳೂರು ಬುಲ್ಸ್ ಹಾಗೂ ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ. ಪಾಯಿಂಟ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿರುವ ಬೆಂಗಳೂರು ಬುಲ್ಸ್ ಈ ಪಂದ್ಯವನ್ನು ಗೆದ್ದರೆ 1ನೇ ಸ್ಥಾನಕ್ಕೇರಲಿದೆ.

ಮತ್ತೊಂದೆಡೆ ಸತತ 12 ಪಂದ್ಯಗಳನ್ನು ಸೋತು ಕೇವಲ 1 ಪಂದ್ಯದಲ್ಲಿ ಗೆದ್ದು ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದ್ದು, ಜಯದ ಹುಡುಕಾಟದಲ್ಲಿದೆ ತೆಲುಗು ಟೈಟಾನ್ಸ್. ತೆಲುಗು ಟೈಟಾನ್ಸ್ ಆಟಗಾರರು ಸಿದ್ಧಾರ್ಥ್ ದೇಸಾಯ್ ಅವರ ಮೇಲೆ ಹೆಚ್ಚು ಅವಲಂಬಿತರಾಗಿದ್ದು, ಬೇರೆ ಆಟಗಾರರಿಂದ ಉತ್ತಮ ಪ್ರದರ್ಶನ ದೊರೆಯದೇ ಇರುವುದು ತೆಲುಗು ಟೈಟಾನ್ಸ್ ಗೆ ಮುಳುವಾಗಿದೆ.

ಬೆಂಗಳೂರು ಬುಲ್ಸ್ ನ ಭರತ್ ಹೂಡ ಹಾಗೂ ತೆಲುಗು ಟೈಟಾನ್ಸ್ ನ ಸಿದ್ಧಾರ್ಥ್ ದೇಸಾಯ್ ಬಾಹುಬಲಿ ಇಬ್ಬರು ಸ್ಟಾರ್ ರೇಡರ್ ಗಳ ಅಬ್ಬರ ಇಂದು ಜೋರಾಗೇ ಇದೆ. ಇದು ಎರಡನೇ ಪಂದ್ಯವಾದರೆ ಇದಕ್ಕೂ ಮುನ್ನ ಮೊದಲನೇ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗು ಯು ಮುಂಬಾ ಸೆಣಸಾಡಲಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...