alex Certify ವಿವಾಹಿತ ಮಹಿಳೆ ಪರಪುರುಷನೊಂದಿಗೆ ಪ್ರೀತಿಯಲ್ಲಿ ಬೀಳುವುದ್ಯಾಕೆ ? ಇಲ್ಲಿದೆ ಇದರ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತ ಮಹಿಳೆ ಪರಪುರುಷನೊಂದಿಗೆ ಪ್ರೀತಿಯಲ್ಲಿ ಬೀಳುವುದ್ಯಾಕೆ ? ಇಲ್ಲಿದೆ ಇದರ ಹಿಂದಿನ ಕಾರಣ

ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತಿದೆ. ಯಾರಿಗೆ ಯಾವಾಗ ಯಾರ ಮೇಲೆ ಬೇಕಾದರೂ ಪ್ರೀತಿ ಹುಟ್ಟಬಹುದು. ಮಹಿಳೆಯರು ಕೂಡ ಇದಕ್ಕೆ ಹೊರತಾಗಿಲ್ಲ. ಅನೇಕ ಬಾರಿ ವಿವಾಹಿತ ಮಹಿಳೆಯರು ಪರ ಪುರುಷನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ.

ಸಾಮಾನ್ಯವಾಗಿ ಈ ರೀತಿಯಾದಾಗ ಮಹಿಳೆಯರು ವಿಷಯ ಮುಚ್ಚಿಡಲು ಪ್ರಯತ್ನಿಸುತ್ತಾರೆ. ಈ ರಹಸ್ಯವನ್ನು ಕುಟುಂಬದ ಸದಸ್ಯರು ಸೇರಿದಂತೆ ಎಲ್ಲರಿಂದಲೂ ಮರೆಮಾಡುತ್ತಾರೆ. ಈ ರೀತಿಯ ಸಂಬಂಧಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದನ್ನು ತಜ್ಞರು ಬಹಿರಂಗಪಡಿಸಿದ್ದಾರೆ. ಯಾವುದೇ ಸಭೆ, ಪಾರ್ಟಿ ಅಥವಾ ಇತರ ಸಮಾರಂಭಗಳಲ್ಲಿ ಭಾಗವಹಿಸಿದಾಗ ವಿವಾಹಿತ ಮಹಿಳೆಯರು ಪರಪುರುಷನೆಡೆಗೆ ಆಕರ್ಷಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ತಜ್ಞರ ಪ್ರಕಾರ ಮಹಿಳೆಯರು ಸಹ ಪುರುಷರಂತೆ ಇತರರೆಡೆಗೆ ಆಕರ್ಷಿತರಾಗುತ್ತಾರೆ. ಹೊರಗಿನಿಂದ ತನ್ನನ್ನು ತಾನು ಸಾಧಾರಣವಾಗಿ ತೋರಿಸಲು ಪ್ರಯತ್ನಿಸುತ್ತಿದ್ದರೂ ಸಹ ಅವಳೊಳಗೆ ಪ್ರೀತಿಯ ಅಲೆಯು ಸಿಡಿಯುತ್ತದೆ. ಮಹಿಳೆಯರು ಬೇರೊಬ್ಬರೊಂದಿಗೆ ಪ್ರೀತಿಯಲ್ಲಿ ಬಿದ್ದಾಗ ಕಲ್ಪನಾ ಲೋಕದಲ್ಲಿ ತೇಲಲಾರಂಭಿಸುತ್ತಾರೆ. ಅದರಲ್ಲೂ ಒಂಟಿಯಾಗಿರುವಾಗ ಯಾರೊಂದಿಗೆ ಏಕಪಕ್ಷೀಯ ಪ್ರೀತಿ ಇರುತ್ತದೋ ಅದೇ ವ್ಯಕ್ತಿಯ ಬಗ್ಗೆ ಯೋಚಿಸುತ್ತಲೇ ಇರುತ್ತಾರೆ.

ಪ್ರೇಮಿಯನ್ನು ಭೇಟಿಯಾದಾಗ ಏನು ಮಾಡಬೇಕು ಎಂಬ  ಕಲ್ಪನೆಗಳು ಅವಳ ಮನಸ್ಸಿನಲ್ಲಿ ಮತ್ತೆ ಮತ್ತೆ ಸುತ್ತುತ್ತವೆ. ಈ ಕಲ್ಪನೆಗಳು ಒಳಗಿನಿಂದ ರೋಮಾಂಚನಗೊಳಿಸುತ್ತವೆ ಮತ್ತು ಸಂತೋಷಪಡಿಸುತ್ತವೆ, ಅದು ಇತರರಿಗೆ  ಅರ್ಥವಾಗುವುದಿಲ್ಲ. ಅಪರಿಚಿತರನ್ನು ಪ್ರೀತಿಸಿದಾಗ ಅವರೊಂದಿಗೆ ದೈಹಿಕ ಸಂಬಂಧ ಹೊಂದುವುದನ್ನು ಕೂಡ ತಪ್ಪಾಗಿ ಪರಿಗಣಿಸುವುದಿಲ್ಲ. ಅದನ್ನು ಭಾವನಾತ್ಮಕ ಬಾಂಧವ್ಯ ಮತ್ತು ಸಂತೋಷದ ಉತ್ತಮ ಮಾರ್ಗವೆಂದು ಪರಿಗಣಿಸುತ್ತಾರೆ.

ಈ ರಹಸ್ಯವನ್ನು ಯಾರಿಗೂ ಹೇಳದಿದ್ದರೂ ತನ್ನ ಅತ್ಯಂತ ವಿಶೇಷ ಸ್ನೇಹಿತರ ಮುಂದೆ ರಹಸ್ಯವನ್ನು ಅನೇಕ ಬಾರಿ ಬಹಿರಂಗಪಡಿಸುತ್ತಾಳೆ. ಆದರೆ ಆ ಮಾಹಿತಿಯು ಮೂರನೆವರನ್ನು ತಲುಪಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಮಹಿಳೆ ತನ್ನ ಪತಿ ಅಥವಾ ಗೆಳೆಯನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಲು ಬಯಸುತ್ತಾಳೆ. ಅದಕ್ಕಾಗಿಯೇ ಸಾಮಾಜಿಕ ಮಾಧ್ಯಮ ಖಾತೆಗಳು, ಫೋನ್ ನಂಬರ್‌, ಸ್ನೇಹಿತರ ಲಿಸ್ಟ್‌, ಇತರ ಮಾಹಿತಿಯನ್ನು ಸಂಗ್ರಹಿಸುತ್ತಾಳೆ. ಪತ್ನಿ ಅಥವಾ ಗೆಳತಿಯರು ತಮ್ಮ ಗುಪ್ತ ರಹಸ್ಯಗಳನ್ನು ಹೇಗೆ ತಿಳಿದುಕೊಳ್ಳುತ್ತಾರೆ ಎಂಬುದೇ ಪುರುಷರನ್ನು ಕಾಡುವ ಪ್ರಶ್ನೆ.

ವಾಸ್ತವವಾಗಿ ಮಹಿಳೆಯರು ತಮ್ಮ ಸಹಜ ರಿವರ್ಸ್ ಸೈಕಲಾಜಿಕಲ್ ತಂತ್ರವನ್ನು ಇದಕ್ಕಾಗಿ ಬಳಸುತ್ತಾರೆ. ಈ ತಂತ್ರದ ಮೂಲಕ ಒಂದು ಸುಳಿವನ್ನು ಇನ್ನೊಂದಕ್ಕೆ ಸಂಪರ್ಕಿಸುತ್ತಾರೆ ಮತ್ತು ಅಂತಿಮವಾಗಿ ತಮ್ಮ ಪ್ರೇಮಿ ಅಥವಾ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಾರೆ. ತಮ್ಮ ಪತಿ ಮತ್ತು ಗೆಳೆಯರ ಫೋನ್‌ಗಳನ್ನು ಮೇಲ್ವಿಚಾರಣೆ ಮಾಡುವ ಮೂಲಕ ಪತ್ತೇದಾರಿಕೆ ನಡೆಸುತ್ತಾರೆ.

ಮನೋವೈದ್ಯರ ಪ್ರಕಾರ ಮಹಿಳೆಯರು ಹೆಚ್ಚಾಗಿ ತಮ್ಮ ಮೆದುಳಿನ ಎಡ ಗೋಳಾರ್ಧವನ್ನು ಬಳಸುತ್ತಾರೆ. ಕಲ್ಪನೆ ಮತ್ತು ಸಹಜ ಸಾಮರ್ಥ್ಯಗಳು ಈ ಗೋಳಾರ್ಧದಲ್ಲಿರುತ್ತವೆ. ಮೆದುಳಿನ ಬಲ ಗೋಳಾರ್ಧವು ತಾರ್ಕಿಕವಾಗಿದೆ, ಅದರ ಮೂಲಕ ವ್ಯಕ್ತಿಯು ತಾರ್ಕಿಕ ಶಕ್ತಿಯನ್ನು ಬಳಸುತ್ತಾನೆ. ಪುರುಷರು ಸಾಮಾನ್ಯವಾಗಿ ಈ ಬಲ ಗೋಳಾರ್ಧವನ್ನು ಹೆಚ್ಚು ಬಳಸುತ್ತಾರೆ. ಈ ಕಾರಣದಿಂದಾಗಿ ಅವರು ಹೆಚ್ಚು ಕಾಲ್ಪನಿಕವಾಗಿರುವುದಿಲ್ಲ. ಆದರೆ ಮಹಿಳೆಯರು ಹೆಚ್ಚು ಭಾವನಾತ್ಮಕ ಮತ್ತು ಗಂಭೀರವಾಗಿರುತ್ತಾರೆ ಎನ್ನಲಾಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...