alex Certify ವಿವಾಹಿತ ಪುರುಷರು ಈ ಕಾರಣಕ್ಕೆ ಸೇವಿಸಬೇಕು ಕುಂಬಳಕಾಯಿ ಬೀಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತ ಪುರುಷರು ಈ ಕಾರಣಕ್ಕೆ ಸೇವಿಸಬೇಕು ಕುಂಬಳಕಾಯಿ ಬೀಜ

ಕುಂಬಳ ಕಾಯಿ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅನ್ನೊದು ನಿಮ್ಗೆಲ್ಲ ಗೊತ್ತೇ ಇದೆ. ಕುಂಬಳ ಕಾಯಿಯನ್ನು ಮೇಲೋಗರಕ್ಕೆ ಬಳಸುವ ನಾವು ಅದರ ಬೀಜವನ್ನು ಎಸೆದು ಬಿಡುತ್ತೇವೆ. ಆದ್ರೆ ಆ ಬೀಜಗಳನ್ನು ಎಸೆಯಬೇಡಿ. ಅದರಿಂದಲೂ ಸಾಕಷ್ಟು ಪ್ರಯೋಜನಗಳಿವೆ.

ಪಂಪ್ಕಿನ್‌ ಬೀಜಗಳು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಪ್ರಯೋಜನಕಾರಿ. ಅವುಗಳ ಸೇವನೆಯಿಂದ ಇನ್ಸುಲಿನ್‌ ಪ್ರಮಾಣ ಸಮತೋಲಿತಗೊಳ್ಳುತ್ತದೆ. ಮಲಗುವ ಮುನ್ನ ಕೆಲವು ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ಬೇಗನೆ ನಿದ್ರೆ ಬರುತ್ತದೆ. ಒತ್ತಡವೂ ಕಡಿಮೆಯಾಗುತ್ತದೆ.

 

ಲೈಂಗಿಕ ಸಮಸ್ಯೆಗಳಿಂದ ತೊಂದರೆಗೊಳಗಾದವರಿಗೆ ಕುಂಬಳಕಾಯಿ ಬೀಜಗಳು ತುಂಬಾ ಅನುಕೂಲ ಮಾಡಿಕೊಡುತ್ತವೆ. ವೈದ್ಯರ ಸಲಹೆಯಂತೆ ನೀವು ಇದನ್ನು ನಿಯಮಿತವಾಗಿ ಸೇವಿಸಬಹುದು. ಸಂಶೋಧನೆಯ ಪ್ರಕಾರ, ಕುಂಬಳಕಾಯಿ ಬೀಜಗಳನ್ನು ತಿನ್ನುವುದರಿಂದ ಪುರುಷರು ಪ್ರಾಸ್ಟೇಟ್ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಅವರ ಲೈಂಗಿಕ ಆರೋಗ್ಯಕ್ಕೆ ಇದು ಬಹಳ ಮುಖ್ಯ. ಪ್ರಾಸ್ಟೇಟ್ ಗ್ರಂಥಿಯನ್ನು ಬಲಪಡಿಸಲು ಮತ್ತು ಆರೋಗ್ಯಕರ ಹಾರ್ಮೋನ್ ಪ್ರಕ್ರಿಯೆಯನ್ನು ಉತ್ತೇಜಿಸಲು ಕುಂಬಳಕಾಯಿ ಬೀಜಗಳನ್ನು ಪುರುಷರು ಸೇವಿಸಬೇಕು. ಕುಂಬಳಕಾಯಿ ಬೀಜಗಳಲ್ಲಿ ಸತುವು ಸಮೃದ್ಧವಾಗಿದೆ, ಆದ್ದರಿಂದ ಅವುಗಳನ್ನು ಸೇವಿಸುವುದರಿಂದ ವೀರ್ಯದ ಗುಣಮಟ್ಟವನ್ನು ಸುಧಾರಿಸಬಹುದು.

ಇದಲ್ಲದೆ ಕುಂಬಳಕಾಯಿ ಬೀಜಗಳ ಸೇವನೆಯಿಂದ ಅನೇಕ ಚರ್ಮದ ಸಮಸ್ಯೆಗಳು ದೂರವಾಗುತ್ತವೆ. ತೂಕ ಇಳಿಸಲು ಕೂಡ ಇದು ಸಹಕಾರಿಯಾಗಿದೆ. ಹೊಟ್ಟೆಯಲ್ಲಿ ಹುಳುಗಳ ಸಮಸ್ಯೆ ಇದ್ದರೆ ಅದನ್ನು ನಿವಾರಣೆ ಮಾಡುತ್ತದೆ. ದೇಹದಲ್ಲಿ ರಕ್ತದ ಕೊರತೆಯಾಗುವುದಿಲ್ಲ. ಮಾನಸಿಕ ಆರೋಗ್ಯವನ್ನೂ ಚೆನ್ನಾಗಿಡುತ್ತದೆ. ಮೂತ್ರನಾಳದ ಸೋಂಕನ್ನು ತಡೆಗಟ್ಟುತ್ತದೆ.

ಮೂತ್ರದ ಅಸಂಯಮ, ಯುಟಿಐ ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಪಂಪ್ಕಿನ್‌ ಸೀಡ್ಸ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವೂ ಇದೆ. ಅಧಿಕ ರಕ್ತದೊತ್ತಡವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಇದು ಸಹಾಯ ಮಾಡುತ್ತದೆ. ನೀವು ಹುರಿದ ಒಣ ಕುಂಬಳಕಾಯಿ ಬೀಜಗಳನ್ನು ಬೆಳಗಿನ ಉಪಾಹಾರವಾಗಿ ಸೇವಿಸಬಹುದು. ಇಲ್ಲದೇ ಹೋದಲ್ಲಿ ಮಲಗುವ ಮುನ್ನ ಕುಂಬಳಕಾಯಿ ಬೀಜಗಳನ್ನು ತಿನ್ನಿ. ಇದನ್ನು ಸೇವಿಸುವುದರಿಂದ ಆಗುವ ಪರಿಣಾಮ ಕೆಲವೇ ದಿನಗಳಲ್ಲಿ ಗೋಚರಿಸಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...