alex Certify ವಿರಾಟ್ ಕೊಹ್ಲಿ ಭೇಟಿ ಮಾಡುವ ಸಲುವಾಗಿಯೇ ಈ ಕೆಲಸ ಮಾಡಿದ ಅಭಿಮಾನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರಾಟ್ ಕೊಹ್ಲಿ ಭೇಟಿ ಮಾಡುವ ಸಲುವಾಗಿಯೇ ಈ ಕೆಲಸ ಮಾಡಿದ ಅಭಿಮಾನಿ…!

ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಫಿದಾ ಆಗದವರೇ ಯಾರೂ ಇಲ್ಲ. ಬ್ಯಾಟ್ ಹಿಡಿದು ಕ್ರಿಕೆಟ್ ಗ್ರೌಂಡ್​​ಗೆ ಎಂಟ್ರಿ ಆದ್ರೆ ಸಾಕು, ಅಲ್ಲಿ ವಿದ್ಯುತ್ ಸಂಚಲನವಾದಂತಿರುತ್ತೆ. ಇದೇ ಕ್ರಿಕೆಟರ್ ಕೊಹ್ಲಿ ಕಟ್ಟಾ ಅಭಿಮಾನಿಗಳು ಜಗತ್ತಿನ ಮೂಲೆ ಮೂಲೆಯಲ್ಲಿದ್ದಾರೆ.

ಇತ್ತೀಚೆಗೆ ಗುವಾಹಟಿಯ ಶಾಂತಿಪುರದ ರಾಹುಲ್ ರೈ, ಕೊಹ್ಲಿಯನ್ನ ಹುಡುಕಿಕೊಂಡು ಅಸ್ಸಾಂನಿಂದ ಗುವಾಹಟಿಯಲ್ಲಿರುವ ಸ್ಟೇಡಿಯಂಗೆ ಬಂದಿದ್ದಾರೆ.

ವಿರಾಟ್ ಕೊಹ್ಲಿ ಹುಚ್ಚು ಅಭಿಮಾನಿಯಾಗಿರುವ ಈತ ಕೊಹ್ಲಿ ಭೇಟಿಯಾಗುವುದು ನನಗೆ ದೇವರು ಕೊಟ್ಟ ಅವಕಾಶ ಎಂದು ರಾಹುರ್ ರೈ ಹೇಳಿಕೊಂಡಿದ್ದಾರೆ.

ಇದೇ ಸೆಪ್ಟೆಂಬರ್ 29ರಂದು ದಕ್ಷಿಣ ಆಫ್ರಿಕಾ ವಿರುದ್ಧದ 2 ನೇ ಟಿ20 ಪಂದ್ಯ ನಡೆದಿತ್ತು. ಆದ್ದರಿಂದ ಟೀಂ ಇಂಡಿಯಾ ಗುವಾಹಟಿಗೆ ಬಂದಿಳಿದಿತ್ತು. ಆಗ ಚಿಕಿತ್ಸೆಗಾಗಿ ಅಲ್ಲಿಗೆ ಬಂದಿದ್ದ ರಾಹುಲ್ ರೈ, ತನ್ನ ಅದೃಷ್ಟ ಪರೀಕ್ಷಿಸಲು, ಹೇಗಾದರೂ ಸರಿ, ವಿರಾಟ್ ಕೊಹ್ಲಿಯನ್ನ ಭೇಟಿಯಾಗಬೇಕೆಂದು ರಾಹುಲ್ ರೈ ಏರ್ಪೋರ್ಟ್ಗೆ ಬಂದಿದ್ದರು.

‘ನಾನು ವಿಮಾನ ನಿಲ್ದಾಣದಲ್ಲಿದ್ದೆ, ಆಗ ವಿರಾಟ್ ಕೊಹ್ಲಿ ಅಲ್ಲಿ ನಡೆದುಕೊಂಡು ಬರ್ತಿರೋದನ್ನ ನೋಡ್ತಿದ್ದೆ. ಅಲ್ಲೇ ಇಂಡಿಯನ್ ಕ್ರಿಕೆಟ್ ಟೀಂ ಪ್ಲೇಯರ್ರನ್ನ ಕರೆದುಕೊಂಡು ಹೋಗುವ ಶಟಲ್ ಬಸ್ ನಿಂತಿತ್ತು. ಆಗ ನಾನು ವಿರಾಟ್ ರನ್ನ ಭೇಟಿ ಮಾಡಲು ಪ್ರಯತ್ನಿಸಿದೆ. ಅಲ್ಲೇ ಇದ್ದ ಸೆಕ್ಯೂರಿಟಿ ಗಾರ್ಡ್ ನನ್ನನ್ನು ಹತ್ತಿರಕ್ಕೂ ಹೋಗಲು ಬಿಟ್ಟಿಲ್ಲ. ಕೆಲ ದಿನಗಳ ಮಟ್ಟಿಗೆ ಇಂಡಿಯನ್ ಕ್ರಿಕೆಟ್ ಪ್ಲೇಯರ್ಸ್ ಅಲ್ಲೇ ಅಭ್ಯಾಸ ಪಂದ್ಯ ಆಡಲಿದ್ದಾರೆ ಅನ್ನುವುದು ನನಗೆ ಗೊತ್ತಿತ್ತು. ಆದ್ದರಿಂದ ನಾನು ಎಸಿಎ ಬರಸಾಪರಾ ಸ್ಟೇಡಿಯಂ ಹತ್ತಿರ ಹೋಗಲು ನಿರ್ಧರಿಸಿದೆ. ಅಲ್ಲಿಗೆ ಹೋದಾಗ ನನ್ನ ಬಹುದಿನಗಳ ಕನಸು ನನಸಾಗಿತ್ತು. ನನ್ನ ನೆಚ್ಚಿನ ಕ್ರಿಕೆಟ್ ಆಟಗಾರನನ್ನ ಭೇಟಿಯಾಗುವುದಲ್ಲದೇ, ಆತನ ಜೊತೆ ಸೆಲ್ಫಿಯನ್ನ ಸಹ ತೆಗೆದುಕೊಳ್ಳುವ ಅವಕಾಶ ಸಿಕ್ಕಿತು.’ ಎಂದು ರಾಹುಲ್ ರೈ ತಮ್ಮ ಮನದಾಳದ ಮಾತನ್ನ ಹೇಳಿಕೊಂಡಿದ್ದಾರೆ.

ವಿರಾಟ್ ರನ್ನ ಭೇಟಿಯಾಗಲೆಂದೇ ಉಭಯ ತಂಡಗಳು ಕಾಯ್ದಿರಿಸಿದ್ದ ಹೋಟೆಲ್​​ನಲ್ಲೇ ನಾನು ರೂಮ್ ಬುಕ್ ಮಾಡಬೇಕಾಯಿತು ಇದಕ್ಕಾಗಿ ನಾನು 23,400 ರೂಪಾಯಿ ಖರ್ಚು ಮಾಡಿದೆ. ಆ ಸಮಯದಲ್ಲಿ ಖಾಲಿ ಕೊಠಡಿಗಳು ಇರುವುದೇ ನನಗೆ ಅನುಮಾನವಾಗಿತ್ತು. ನನ್ನ ಅದೃಷ್ಟಕ್ಕೆ ಕೊಠಡಿ ನನಗೆ ಸಿಕ್ಕಿತ್ತು. ಆಗ ನಾನು ಯಾವುದೇ ಉದ್ದೇಶಕ್ಕಾಗಿ ವಿರಾಟ್ನನ್ನ ಭೇಟಿಯಾಗುವ ಅವಕಾಶ ಕಳೆದುಕೊಳ್ಳುವುದಕ್ಕೆ ಸಿದ್ಧನಿರಲಿಲ್ಲ. ಅನೇಕ ಬಾರಿ ಅವರು ಓಡಾಡುವಾಗ ನಾನು ಕರೆದಿದ್ದೇನೆ. ಕೊನೆಗೆ ಒಮ್ಮೆ ಅದನ್ನ ಕೇಳಿಸಿಕೊಂಡ ವಿರಾಟ್, ಹೊರಗೆ ಅವರನ್ನ ಭೇಟಿಯಾಗುವ ಅವಕಾಶ ಸಿಕ್ಕಿತು. ಆಗ ನಾನು ಅವರ ಹೆಸರಿನಲ್ಲಿ ರಚಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇರುವಂತ ಇನ್ಸ್ಟಾ ಫ್ಯಾನ್ ಪೇಜ್ ಚೌಕಟ್ಟನ್ನ ಅವರ ಮುಂದೆ ಹಿಡಿದೆ. ಆಗ ಅವರು ಅದರ ಮೇಲೆ ಆಟೋಗ್ರಾಫ್ ಹಾಕಿದರು ಅಷ್ಟೆ ಅಲ್ಲ ಅದೇ ಸಂದರ್ಭದಲ್ಲಿ ಸೆಲ್ಫಿಯನ್ನ ಕ್ಲಿಕ್ಕಿಸಿಕೊಂಡೇವು.’ ಹೀಗೆ ಒಂದೊಂದಾಗಿ ತಮ್ಮ ಜೀವನದ ಅದ್ಭುತ ಘಳಿಗೆಯನ್ನ ಸವಿಸ್ತಾರವಾಗಿ ಮಾಧ್ಯಮದ ಮುಂದೆ ಹೇಳಿದ್ದಾರೆ.

2011ರಲ್ಲಿ ನಡೆದ ವಿಶ್ವಕಪ್ ಫೈನಲ್​​ನಲ್ಲಿ ರಾಹುಲ್ ರೈ ವಿರಾಟ್​​ರನ್ನ ಭೇಟಿ ಮಾಡಿದ್ದರು. ಆಗ ಇವರ ತಂದೆ ಅವರನ್ನ ಭೇಟಿ ಮಾಡಿಸಿದ್ದರು. ಈಗ ಮತ್ತೆ ಅವರಿಗೆ ಭೇಟಿಯಾಗುವ ಅವಕಾಶ ಸಿಕ್ಕಿದೆ ಎಂದು ಭಾವುಕರಾಗಿ ಹೇಳುತ್ತಾರೆ ರಾಹುಲ್ ರೈ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...