alex Certify ವಿಮಾನದಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಹೃದ್ರೋಗಿಗಳಿಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಹೃದ್ರೋಗಿಗಳಿಗೆ ತಿಳಿದಿರಲಿ ಈ ವಿಷಯ

ಒಮ್ಮೆ ಹೃದಯಾಘಾತಕ್ಕೆ ಒಳಗಾದವರು ವಿಮಾನದಲ್ಲಿ ಪ್ರಯಾಣಿಸಬಾರದು, ಇದರಿಂದ ಮತ್ತೊಮ್ಮೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎಂದು ಹೇಳುವುದನ್ನು ನೀವು ಕೇಳಿರಬಹುದು. ಇದು ಎಷ್ಟು ನಿಜ ಎಂಬುದು ನಿಮಗೆ ಗೊತ್ತೇ…? ಇದರಲ್ಲಿ ಯಾವುದೇ ಹುರುಳಿಲ್ಲ. ಮುನ್ನೆಚ್ಚರಿಕಾ ಕ್ರಮ ಕೈಗೊಂಡರೆ ಸಾಕು.

ಹೃದ್ರೋಗ ನಿಮ್ಮ ಪ್ರಯಾಣದ ಆಸಕ್ತಿಗೆ ತಡೆಯಾಗದು. ಸರಳ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ಹೃದಯಾಘಾತ ಮತ್ತೆ ನಡೆಯುವುದನ್ನು ನೀವು ತಪ್ಪಿಸಬಹುದು. ಪ್ರಯಾಣದಿಂದ ಮನಸ್ಸಿನ ಮತ್ತು ದೇಹದ ಆರೋಗ್ಯ ಚೇತರಿಕೆಯಾಗುವುದು ಸಹಜ.

ಬಸ್ಸು‌ – ರೈಲುಗಳಲ್ಲಿ ಸುರಕ್ಷಿತವಾಗಿ ಪ್ರಯಾಣ ನಡೆಸಬಹುದಾದರೂ ವಿಮಾನದಲ್ಲಿ ಪ್ರಯಾಣಿಸುವ ಮುನ್ನ ವೈದ್ಯರ ಅಭಿಪ್ರಾಯ ತೆಗೆದುಕೊಳ್ಳುವುದು ಬಹಳ ಮುಖ್ಯ. ಹೃದಯಾಘಾತವಾದ ಮೂರು ವಾರಗಳ ಬಳಿಕ ವಿಮಾನಯಾನ ಮಾಡುವುದು ಸುರಕ್ಷಿತ ಎಂಬುದನ್ನು ಅಮೆರಿಕನ್ ಸಂಸ್ಥೆಯೊಂದು ದೃಢಪಡಿಸಿದೆ.

ಉಸಿರಾಟದ ತೊಂದರೆ, ಎದೆನೋವು, ಅನಿಯಮಿತ ಹೃದಯ ಬಡಿತ, ಬೆವರುವುದು, ಮೊದಲಾದ ವಿಪರೀತ ಲಕ್ಷಣಗಳು ಕಂಡು ಬಂದರೆ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಮತ್ತು ಆಂಬ್ಯುಲೆನ್ಸ್ ಗೆ ಕರೆ ಮಾಡುವುದು ಒಳ್ಳೆಯದು. ವಿಮಾನ ಹೆಚ್ಚಿನ ಎತ್ತರದಲ್ಲಿ ಹಾರುವಾಗ ಗಾಳಿಯು ತೆಳುವಾಗುವುದರಿಂದ ಉಸಿರಾಟದ ತೊಂದರೆ ಕಂಡುಬರಬಹುದು. ಇದಕ್ಕಾಗಿ ಫ್ಲೈಟ್ ಅಟೆಂಡೆಂಟ್ ಸಹಾಯ ಪಡೆಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...