alex Certify ವಿಭಿನ್ನ ಲುಕ್​ನಲ್ಲಿ ಪ್ರಿಯಾಂಕ ಉಪೇಂದ್ರ ಫೋಟೋ ಶೂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಭಿನ್ನ ಲುಕ್​ನಲ್ಲಿ ಪ್ರಿಯಾಂಕ ಉಪೇಂದ್ರ ಫೋಟೋ ಶೂಟ್

ನಟಿ ಪ್ರಿಯಾಂಕ ಉಪೇಂದ್ರ ಅವರು ಬ್ಯೂಟಿ ವಿತ್ ಬ್ರೈನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕುಟುಂಬ ಮತ್ತು ಸಿನಿಮಾ ಎರಡರಲ್ಲೂ ಸಮತೋಲನ ಸಾಧಿಸುತ್ತಾ ಇಂದಿಗೂ ಯಶಸ್ಸಿನ ಉತ್ತುಂಗದಲ್ಲೇ ಇರುವವರು ಹೆಚ್​2ಓ ಬೆಡಗಿ. ಸದ್ಯ ಪ್ರಿಯಾಂಕ ಉಪೇಂದ್ರ ಅವರ 8 ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಅವರು ಹೊಸ ಲುಕ್​ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಆ ಮೂಲಕ ಟ್ರೆಂಡ್​​ಗೆ ತಕ್ಕಂತೆ ಅಪ್​ಡೇಟ್​ ಆಗಲೇಬೇಕು ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

1996 ರಲ್ಲಿ ಮಿಸ್​ ಕಲ್ಕತ್ತಾ ಆಗಿ ಎಲ್ಲರ ಗಮನ ಸೆಳೆದ ಪ್ರಿಯಾಂಕ ಅವರನ್ನು ನಾವು ಮಾಡರ್ನ್ ಮತ್ತು ಸಾಂಪ್ರದಾಯಿಕ ಲುಕ್​ನಲ್ಲಿ ನೋಡಿದ್ದೆವು. ಆದರೆ ಈಗ ಪ್ರಿಯಾಂಕ ಅವರು ತಮ್ಮ ಕಂಫರ್ಟ್​ ಶೆಲ್​ನಿಂದ ಆಚೆ ಬಂದು ಹೈ ಫ್ಯಾಷನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ ಅವರ ಹೊಸ ಫೋಟೋ ಶೂಟ್ ವಾವ್! ಎನಿಸುತ್ತವೆ.

ವಿಶ್ವದ ಮಹಿಳೆಯರ ಅಂದ ಹೆಚ್ಚಿಸಿರುವ ಇಟಾಲಿಯನ್ ಜ್ಯುವೆಲ್ಲರಿ

ಸೆಲೆಬ್ರಿಟಿ ಫ್ಯಾಷನ್ ಡಿಸೈನರ್​ ಲಕ್ಷ್ಮೀ ಕೃಷ್ಣ ಅವರು ವಿನ್ಯಾಸ ಮಾಡಿರುವ ಉಡುಗೆಗಳಲ್ಲಿ ಪ್ರಿಯಾಂಕ ಉಪೇಂದ್ರ ವಿಭಿನ್ನವಾಗಿ ಕಾಣುತ್ತಿದ್ದಾರೆ. ಕಟ್​ ಪ್ಯಾಂಟ್​ ಸೂಟ್, ಪೆಪ್ಲಮ್ ಬ್ಲೌಸ್, ಹೈ ಫ್ಯಾಷನ್ ಗೌನ್​ನಲ್ಲಿ ಪ್ರಿಯಾಂಕ ಕಣ್ಮನ ಸೆಳೆಯುತ್ತಾರೆ. ಇನ್ನೂ ಪ್ರಿಯಾಂಕ ಅವರು ಈ ಫೋಟೋಗಳನ್ನು ತಮ್ಮ ಇನ್​ ಸ್ಟಾಗ್ರಾಂ ಅಕೌಂಟ್​ ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕ್ವೀನ್ ಲುಕ್​ನಲ್ಲಿ ರಾಯಲ್ ಆಗಿ ಕಾಣ್ತಿದ್ದೀರಿ, ಬೊಂಬೆಯಂತೆ ಕಾಣುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...