
ನಟಿ ಪ್ರಿಯಾಂಕ ಉಪೇಂದ್ರ ಅವರು ಬ್ಯೂಟಿ ವಿತ್ ಬ್ರೈನ್ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕುಟುಂಬ ಮತ್ತು ಸಿನಿಮಾ ಎರಡರಲ್ಲೂ ಸಮತೋಲನ ಸಾಧಿಸುತ್ತಾ ಇಂದಿಗೂ ಯಶಸ್ಸಿನ ಉತ್ತುಂಗದಲ್ಲೇ ಇರುವವರು ಹೆಚ್2ಓ ಬೆಡಗಿ. ಸದ್ಯ ಪ್ರಿಯಾಂಕ ಉಪೇಂದ್ರ ಅವರ 8 ಸಿನಿಮಾಗಳು ಬಿಡುಗಡೆಯ ಹಾದಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಅವರು ಹೊಸ ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಆ ಮೂಲಕ ಟ್ರೆಂಡ್ಗೆ ತಕ್ಕಂತೆ ಅಪ್ಡೇಟ್ ಆಗಲೇಬೇಕು ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.
1996 ರಲ್ಲಿ ಮಿಸ್ ಕಲ್ಕತ್ತಾ ಆಗಿ ಎಲ್ಲರ ಗಮನ ಸೆಳೆದ ಪ್ರಿಯಾಂಕ ಅವರನ್ನು ನಾವು ಮಾಡರ್ನ್ ಮತ್ತು ಸಾಂಪ್ರದಾಯಿಕ ಲುಕ್ನಲ್ಲಿ ನೋಡಿದ್ದೆವು. ಆದರೆ ಈಗ ಪ್ರಿಯಾಂಕ ಅವರು ತಮ್ಮ ಕಂಫರ್ಟ್ ಶೆಲ್ನಿಂದ ಆಚೆ ಬಂದು ಹೈ ಫ್ಯಾಷನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕ ಅವರ ಹೊಸ ಫೋಟೋ ಶೂಟ್ ವಾವ್! ಎನಿಸುತ್ತವೆ.
ವಿಶ್ವದ ಮಹಿಳೆಯರ ಅಂದ ಹೆಚ್ಚಿಸಿರುವ ಇಟಾಲಿಯನ್ ಜ್ಯುವೆಲ್ಲರಿ
ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಲಕ್ಷ್ಮೀ ಕೃಷ್ಣ ಅವರು ವಿನ್ಯಾಸ ಮಾಡಿರುವ ಉಡುಗೆಗಳಲ್ಲಿ ಪ್ರಿಯಾಂಕ ಉಪೇಂದ್ರ ವಿಭಿನ್ನವಾಗಿ ಕಾಣುತ್ತಿದ್ದಾರೆ. ಕಟ್ ಪ್ಯಾಂಟ್ ಸೂಟ್, ಪೆಪ್ಲಮ್ ಬ್ಲೌಸ್, ಹೈ ಫ್ಯಾಷನ್ ಗೌನ್ನಲ್ಲಿ ಪ್ರಿಯಾಂಕ ಕಣ್ಮನ ಸೆಳೆಯುತ್ತಾರೆ. ಇನ್ನೂ ಪ್ರಿಯಾಂಕ ಅವರು ಈ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಕ್ವೀನ್ ಲುಕ್ನಲ್ಲಿ ರಾಯಲ್ ಆಗಿ ಕಾಣ್ತಿದ್ದೀರಿ, ಬೊಂಬೆಯಂತೆ ಕಾಣುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





