ಜಗತ್ತಿನಲ್ಲಿ ಅನೇಕ ಅದ್ಭುತ, ಅನನ್ಯ, ಚಿತ್ರ-ವಿಚಿತ್ರ ಸ್ಥಳಗಳಿವೆ. ಇವೆಲ್ಲವನ್ನೂ ನಾವು ನೋಡಿರಲು ಸಾಧ್ಯವಿಲ್ಲ. ಇಂದು ನಾವು ಕೆಲ ಹೊಟೇಲ್ ಗಳ ಬಗ್ಗೆ ನಿಮಗೆ ಹೇಳ್ತೇವೆ. ಚಿತ್ರವಿಚಿತ್ರವಾಗಿ ಕಟ್ಟಿರುವ ಈ ಹೊಟೇಲ್ ಗಳು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿವೆ.
ಒಳಚರಂಡಿ ಪೈಪ್ ಒಳಗೆ ಹೊಟೇಲ್ (ಆಸ್ಟ್ರಿಯಾ) : 2 ಮೀಟರ್ ಉದ್ದದ ಚರಂಡಿಗೆ ಬಳಸುವ ಪೈಪ್ ರೂಪದಲ್ಲಿ ಈ ಹೊಟೇಲ್ ಇದೆ. ಈ ಪೈಪ್ ಒಳಗೆ ಸಣ್ಣ ಹಾಸಿಗೆ, ಕಪಾಟಿದೆ. ಲೈಟಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಡಾಗ್ ಬರ್ಕ್ ಪಾರ್ಕ್ (ಅಮೆರಿಕಾ) : ಗೆಸ್ಟ್ ಹೌಸ್ ದೊಡ್ಡ ನಾಯಿಯ ರೀತಿ ಕಾಣುತ್ತದೆ. ಮರದಿಂದ ಮಾಡಿದ ಈ ಹೊಟೇಲ್ 5 ಮೀಟರ್ ಉದ್ದ ಹಾಗೂ 5 ಮೀಟರ್ ಅಗಲವಿದೆ.
ಮ್ಯಾಜಿಕ್ ಮೌಂಟೇನ್ ಲಾಡ್ಜ್, ಚಿಲಿ : ಪಿರಾಮಿಡ್ ಆಕಾರದಲ್ಲಿ ಈ ಹೊಟೇಲ್ ಇದೆ. ಈ ಹೊಟೇಲ್ ನಲ್ಲಿ 5 ಮಹಡಿಗಳಿದ್ದು, 13 ಕೊಠಡಿಗಳಿವೆ. ಮರ ಹಾಗೂ ಕಲ್ಲಿನಿಂದ ಇದನ್ನು ಮಾಡಲಾಗಿದೆ.
ಅಂಡರ್ ವಾಟರ್ ಹೊಟೇಲ್ (ದುಬೈ) : ದುಬೈನಲ್ಲಿ ಈ ಹೊಟೇಲನ್ನು ಎರಡು ಡಿಸ್ಕ್ ರೂಪದಲ್ಲಿ ನಿರ್ಮಾಣ ಮಾಡಲಾಗಿದೆ. ಒಂದು ನೀರಿನೊಳಗಿದ್ದರೆ ಇನ್ನೊಂದು ನೀರಿನಿಂದ ಮೇಲಿದೆ.