ವಿರೋಧ ಪಕ್ಷಗಳು ಪದೇ ಪದೇ ಟೀಕಿಸುತ್ತಿರುವ ನಿರುದ್ಯೋಗತನದ ಸವಾಲನ್ನು ಈ ಬಾರಿಯ ಚುನಾವಣೆಯ ಸಮಯದ ಬಳಿಕ ಮೋದಿ ಸರ್ಕಾರವು ಗೆದ್ದು ತೋರಿಸುತ್ತದೆ ಎಂದು ಬಿಜೆಪಿಯ ಅಲಹಾಬಾದ್ ದಕ್ಷಿಣದ ಅಭ್ಯರ್ಥಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಈ ಮಾತನ್ನು ಹೇಳಿದ್ದಾರೆ.
ಈ ಹಿಂದೆ ಅಲಹಾಬಾದ್ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್ ರಾಜ್ನಲ್ಲಿ ರೌಂಡ್ಸ್ ಹಾಕಿದ ಸಿದ್ಧಾರ್ಥ್ ನಾಥ್ ಸಿಂಗ್ ಸ್ಥಳೀಯ ಮಾರುಕಟ್ಟೆಗಳಲ್ಲಿ ಓಡಾಡಿ ಚಹಾ ಹಾಗೂ ಪಕೋಡಗಳನ್ನು ಮಾರಾಟ ಮಾಡುವವರನ್ನು ಹುರಿದುಂಬಿಸಿದ್ದಾರೆ. ಸಿದ್ಧಾರ್ಥ್ ನಾಥ್ ಸಿಂಗ್ಗೆ ಬೆಂಬಲಿಗರು ಸಹ ಸಾಥ್ ನೀಡಿದ್ದಾರೆ. ಸಮಾಜವಾದಿ ಪಕ್ಷಕ್ಕೆ ಸೇರಿದವರು ನಿಜವಾದ ನಿರುದ್ಯೋಗಿಗಳು ಎಂದು ಸಿದ್ಧಾರ್ಥ್ನಾಥ್ ಸಿಂಗ್ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕಾಲದಲ್ಲಿ ಪೂರ್ವಾಂಚಲ್ ಎಕ್ಸ್ಪ್ರೆಸ್ವೇ ನಿರ್ಮಿಸುವಾಗ 15 ಸಾವಿರ ಕೋಟಿ ರೂಪಾಯಿ ವೆಚ್ಚವಾಗಿತ್ತು. ಆದರೆ ನಾವು ಕೇವಲ 4500 ಕೋಟಿ ರೂಪಾಯಿ ಬಜೆಟ್ನಲ್ಲಿ ವಿಶಾಲವಾದ ಹಾಗೂ ಗುಣಮಟ್ಟದ ಎಕ್ಸ್ಪ್ರೆಸ್ ವೇಯನ್ನು ನಿರ್ಮಿಸಿದ್ದೇನೆ. ಹಾಗಾದರೆ ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ಅಷ್ಟೆಲ್ಲ ಹಣ ಹೇಗೆ ಖರ್ಚಾಯಿತು..? ಆ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನೆ ಮಾಡಿದ್ದಾರೆ.
ಕ್ಯಾಂಪೇನ್ ವಿಡಿಯೋಗಳಲ್ಲಿ ಬಿಜೆಪಿ ಶಾಸಕ ನಂದ್ಗೋಪಾಲ್ ಗುಪ್ತಾ ಹಾಗೂ ಸಿದ್ಧಾರ್ಥ್ ನಾಥ್ ಸಿಂಗ್ ಪಕೋಡಾ, ಪುರಿ, ಜಿಲೇಬಿಗಳನ್ನು ಕರಿಯುವುದು ಹಾಗೂ ಚಹಾ ಮಾಡುವ ಮೂಲಕ ಪಕ್ಷದ ಪರ ಪ್ರಚಾರ ಮಾಡಿದ್ದಾರೆ.