ಪಂಜಾಬ್ನ ಚುನಾವಣಾ ಫಲಿತಾಂಶಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಪಂಜಾಬ್ನಾದ್ಯಂತ ಸಿಹಿ ತಿಂಡಿಗಳ ಅಂಗಡಿಗಳಲ್ಲಿ ಸಿಹಿ ತಿಂಡಿಗಳ ತಯಾರಿ ಬಲುಜೋರಾಗಿ ನಡೆಯುತ್ತಿದೆ. ನಾಳೆಯ ಗೆಲುವಿನ ಆಚರಣೆಗೆ ಸಿದ್ಧವಾಗಿರುವ ಬಹುತೇಕ ರಾಜಕೀಯ ಪಕ್ಷಗಳು ಟನ್ಗಟ್ಟಲೇ ಲಡ್ಡುಗಳು ಹಾಗೂ ಇತರೆ ಸಿಹಿ ತಿಂಡಿಗಳಿಗೆ ಬೇಡಿಕೆ ಇಟ್ಟಿವೆಯಂತೆ.
ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ವಿವಿಧ ರೀತಿಯ ಲಡ್ಡುಗಳಿಗೆ ಬೇಕರಿಗಳಲ್ಲಿ ಆರ್ಡರ್ಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಲೂಧಿಯಾನದಲ್ಲಿರುವ ಬೇಕರಿಯೊಂದು ಜೀತ್ ಕೆ ಲಡ್ಡೂಸ್( ಗೆಲುವಿನ ಲಡ್ಡು) ತಯಾರಿಸುತ್ತಿದೆ. ಇದರಲ್ಲಿ ಪ್ರತಿಯೊಂದು ಲಡ್ಡು 5 ಕೆಜಿ ತೂಕವನ್ನು ಹೊಂದಿರುತ್ತದೆ. ಪಂಜಾಬ್ನ ಹಲ್ವಾಯಿ ಅಸೋಸಿಯೇಷನ್ನ ಅಧ್ಯಕ್ಷ ನರೀಂದರ್ ಸಿಂಗ್ ಈ ವಿಚಾರವಾಗಿ ಮಾತನಾಡಿದ್ದು ಈ ವರ್ಷ ನಾವು ವಿಧಾನಸಭಾ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಗೆಲುವನ್ನು ಸಂಭ್ರಮಿಸಲು ಲಡ್ಡುಗಳ ಆರ್ಡರ್ನ್ನು ದೊಡ್ಡ ಪ್ರಮಾಣದಲ್ಲಿ ಪಡೆದಿದ್ದೇವೆ ಎಂದು ಹೇಳಿದರು.