
ಸಾವಿನ ಅಂಚಿನಲ್ಲಿದ್ದ ಮೂಕ ಪ್ರಾಣಿಯನ್ನು ರಕ್ಷಿಸುವ ಮೂಲಕ ಪಂಜಾಬ್‌ನಲ್ಲಿ ವ್ಯಕ್ತಿಯೊಬ್ಬ ಸಮಾಜಕ್ಕೆ ಇಂಥದ್ದೇ ಉತ್ತಮ ಸಂದೇಶವನ್ನು ಕೊಟ್ಟಿದ್ದಾನೆ. ಪಂಜಾಬ್‌ನ ಮಾನ್ಸಾ ಎಂಬಲ್ಲಿ ವಿದ್ಯುತ್ ಸ್ಪರ್ಶಕ್ಕೆ ತುತ್ತಾಗಿ ಹಸುವೊಂದು ಪ್ರಾಣ ಕಳೆದುಕೊಳ್ಳುವುದರಲ್ಲಿತ್ತು. ವ್ಯಕ್ತಿಯೊಬ್ಬ ಹಸುವನ್ನು ಬಚಾವ್ ಮಾಡಿದ್ದಾನೆ.
ವಿದ್ಯುತ್ ಕಂಬದ ಸುತ್ತ ನೀರು ನಿಂತಿತ್ತು. ಹಸುವಿಗೆ ಅಪಾಯದ ಅರಿವೇ ಇಲ್ಲ. ಅದೇ ಜಾಗದಲ್ಲಿ ತಾನೂ ನಿಂತಿದೆ. ಆಕಸ್ಮಿಕವಾಗಿ ಹಸುವಿನ ದೇಹ ವಿದ್ಯುತ್ ಕಂಬಕ್ಕೆ ಸ್ಪರ್ಷಿಸಿದ್ದರಿಂದ ಶಾಕ್ ತಗುಲಿ ಹಸು ನಡುಗಲಾರಂಭಿಸಿತ್ತು. ಹಸು ನೋವಿನಿಂದ ನರಳುತ್ತಿರುವುದನ್ನು ನೋಡಿದ ಅಂಗಡಿಯವನು ಕೂಡಲೇ ಅದರತ್ತ ಧಾವಿಸಿದ.
ಮೊದಲು ಕೈಯಲ್ಲಿ ಬಟ್ಟೆಯ ತುಂಡನ್ನು ಇಟ್ಟುಕೊಂಡು ಅದರ ಕಾಲುಗಳನ್ನು ಕಟ್ಟಿದ. ಇತರ ದಾರಿಹೋಕರು ಕೂಡ ಅಂಗಡಿಯವನಿಗೆ ಸಾಥ್ ಕೊಟ್ಟಿದ್ದಾರೆ. ಎಲ್ಲರೂ ಸೇರಿ ಹಸುವನ್ನು ವಿದ್ಯುತ್ ಸ್ಪರ್ಷದಿಂದ ರಕ್ಷಿಸಿ ಕರೆತಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಗಡಿಯಾತನ ಸಮಯ ಪ್ರಜ್ಞೆ ಮತ್ತು ಮಾನವೀಯತೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ದಯಾಮಯಿ ಅಂಗಡಿಯಾತನಿಗೆ ಬದುಕಿನಲ್ಲಿ ಬಯಸಿದ್ದೆಲ್ಲ ಸಿಗಲಿ ಎಂದು ಹಾರೈಸಿದ್ದಾರೆ.