ಶಿವಮೊಗ್ಗ : ಮಹಾಮಾರಿ, ವಿದ್ಯಾರ್ಥಿಗಳೊಂದಿಗಿನ ನಂಟನ್ನು ಬಿಡುವಂತೆ ಕಾಣಿಸುತ್ತಿಲ್ಲ. ಕೊರೊನಾ ಶಾಲಾ, ಕಾಲೇಜು – ಹಾಸ್ಟೆಲ್ ಗಳನ್ನೇ ತನ್ನ ಹಾಟ್ ಸ್ಪಾಟ್ ಗಳನ್ನಾಗಿ ಮಾಡಿಕೊಳ್ಳುತ್ತಿದೆ. ಸದ್ಯ ಜಿಲ್ಲೆಯಲ್ಲಿನ ನರ್ಸಿಂಗ್ ಕಾಲೇಜೊಂದರ 24 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿನ ನಿರ್ಮಲಾ ನರ್ಸಿಂಗ್ ಕಾಲೇಜಿನಲ್ಲಿನ ಬರೋಬ್ಬರಿ 24 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಆತಂಕ ಮನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವಿದ್ಯಾರ್ಥಿಗಳೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.
200 ಕೋಟಿ ಸುಲಿಗೆ ಪ್ರಕರಣ; ತನಿಖಾ ಸಂಸ್ಥೆ ಎದುರು ಹಾಜರಾದ ನಟಿ ಜಾಕ್ವೆಲಿನ್!
ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್, ಕಾಲೇಜು ಹಾಗೂ ಹಾಸ್ಟೆಲ್ ನ್ನು ವೀಕ್ಷಿಸಿದ್ದಾರೆ. ಅಲ್ಲದೇ, 24 ವಿದ್ಯಾರ್ಥಿಗಳಲ್ಲಿ ಸೋಂಕು ಹರಡಿರುವುದನ್ನು ತಿಳಿಸಿದ್ದಾರೆ. ಸದ್ಯ ಕಾಲೇಜು ಹಾಗೂ ಹಾಸ್ಟೆಲ್ ನ್ನು ಸೀಲ್ ಡೌನ್ ಮಾಡಲಾಗಿದೆ.