ವಿದೇಶ ಪ್ರಯಾಣಕ್ಕೆ ಹೋಗುವ ಹಲವರಿಗೆ ಸಾಮಾನ್ಯವಾಗಿ ಕಾಡುವ ಪ್ರಮುಖ ಸಮಸ್ಯೆ ಎಂದರೆ ಜೆಟ್ ಲ್ಯಾಗ್.
ಎರಡು ಪ್ರದೇಶಗಳ ನಡುವಿನ ಸಮಯದ ವ್ಯತ್ಯಾಸದಿಂದ ಮನುಷ್ಯನ ದೇಹದ ಜೈವಿಕ ಗಡಿಯಾರದಲ್ಲಿ ಏರುಪೇರಾಗಿ ಉಂಟಾಗುವ ಸಮಸ್ಯೆಯೇ ಜೆಟ್ ಲ್ಯಾಗ್.
ಈ ಸಂದರ್ಭ ಮಾನಸಿಕ ಒತ್ತಡ, ನಿದ್ರಾಹೀನತೆ, ಅಜೀರ್ಣ ಇತ್ಯಾದಿ ಕಾಡುತ್ತದೆ. ಹೀಗಾಗಿ ಸಮಯದ ವ್ಯತ್ಯಾಸ ತಿಳಿಯಲು ತಲುಪಬೇಕಾದ ಪ್ರದೇಶದ ಸ್ಥಳೀಯ ಸಮಸ್ಯೆಗೆ ಸಮಯ ಹೊಂದಿಸಿಕೊಳ್ಳಬೇಕು. ನಿದ್ರೆಯಲ್ಲಿ ಏರುಪೇರಾಗಿದ್ದರೆ ಸ್ವಲ್ಪ ನಿದ್ರಿಸಬಹುದು. ತಲುಪಿದ ತಕ್ಷಣ ಅತಿಯಾದ ಆಹಾರ ಸೇವನೆ ಒಳ್ಳೆಯದಲ್ಲ.