ವಿದೇಶಕ್ಕೆ ತೆರಳಬೇಕು ಎಂಬ ಕನಸು ಲಕ್ಷಾಂತರ ಭಾರತೀಯರಲ್ಲಿದೆ. ಗುಜರಾತ್ನ ಗ್ರಾಮವೊಂದರಲ್ಲಿ ನೀವು ಇಂತಹದ್ದೊಂದು ಕನಸನ್ನು ಅತ್ಯಂತ ಸುಲಭವಾಗಿ ಈಡೇರಿಸಿಕೊಳ್ಳಬಹುದಾಗಿದೆ. ಏಕೆಂದರೆ ಈ ಗ್ರಾಮದ ನಿವಾಸಿಗಳು ವಿದೇಶಕ್ಕೆ ತೆರಳುವ ಇಲ್ಲಿನ ಜನತೆಯ ಕನಸುಗಳನ್ನು ನನಸು ಮಾಡಲು ಮುಂದಾಗುತ್ತಾರೆ.
ಸ್ಥಳೀಯ ಸಮುದಾಯವು ಇಂತಹ ಕನಸುಗಳು ನನಸಾಗಲೆಂದೇ ದೇಣಿಗೆ ಸಂಗ್ರಹಿಸಲು ಮುಂದಾಗುತ್ತದೆ. ಡೊಲರಿಯಾ ಗ್ರಾಮದ ಜನತೆ ಶೂನ್ಯ ಬಡ್ಡಿದರದಲ್ಲಿ ಹಣವನ್ನು ಸಾಲದ ರೂಪದಲ್ಲಿ ನೀಡುತ್ತದೆ. ಸಾಲ ಮರುಪಾವತಿ ಮಾಡುವವರ ಮೇಲೆ ಇಎಂಐ ಹೊರೆ ಇರೋದಿಲ್ಲ. ಡೊಲರಿಯಾ ಗ್ರಾಮವು ಗುಜರಾತ್ನ ವಡೋದರಾದಲ್ಲಿದೆ.
ಇಲ್ಲಿಂದ ಸಾಲ ಪಡೆದು ವಿದೇಶಕ್ಕೆ ತೆರಳಿ ಅಲ್ಲಿ ಸೆಟಲ್ ಆದವರು ಈ ಗ್ರಾಮಕ್ಕೆ ಡಬಲ್ ಹಣವನ್ನು ಕಳುಹಿಸಿಕೊಡುತ್ತಾರೆ. ವಿದೇಶದಲ್ಲಿ ನೆಲೆಸಲು ಸ್ಥಳೀಯ ಸಮುದಾಯದಿಂದ ಹಣಕಾಸಿನ ನೆರವು ಪಡೆದ ಪ್ರತಿಯೊಬ್ಬ ಜನರ ವಿಚಾರದಲ್ಲಿಯೂ ಇದು ನಿಜವಾಗಿದೆ. ಜನರು ಲಕ್ಷಗಳ ರೂಪದಲ್ಲಿ ಹಣವನ್ನು ಪಡೆದು ಈ ಗ್ರಾಮದ ಜನತೆಗೆ ದುಪ್ಪಟ್ಟು ಹಣವನ್ನು ಹಿಂದಿರುಗಿಸಿದ ಸಾಕಷ್ಟು ನಿದರ್ಶನಗಳು ಇಲ್ಲಿ ನಡೆದಿದೆ.