alex Certify ವಿಡಿಯೋ ಕಾಲ್ ಮೂಲಕ ‘ಕರ್ವಾ ಚೌತ್’ ಆಚರಿಸಿದ ಯಜುವೇಂದ್ರ ಚಾಹಲ್ – ಧನಶ್ರೀ ದಂಪತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಡಿಯೋ ಕಾಲ್ ಮೂಲಕ ‘ಕರ್ವಾ ಚೌತ್’ ಆಚರಿಸಿದ ಯಜುವೇಂದ್ರ ಚಾಹಲ್ – ಧನಶ್ರೀ ದಂಪತಿ….!

ಗುರುವಾರದಂದು ದೇಶದಾದ್ಯಂತ ‘ಕರ್ವಾ ಚೌತ್’ ಆಚರಿಸಲಾಗಿದೆ. ಉತ್ತರ ಭಾರತದಲ್ಲಿ ‘ಕರ್ವಾ ಚೌತ್’ ಹೆಚ್ಚಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಉಪವಾಸ ಆಚರಿಸಿ ಪತಿ ಹಾಗೂ ಚಂದ್ರನ ದರ್ಶನವಾದ ನಂತರವೇ ವ್ರತ ಮುರಿಯುತ್ತಾರೆ.

ಆದರೆ ಪ್ರಸ್ತುತ ಟೀಮ್ ಇಂಡಿಯಾ ಟಿ 20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಾದಲ್ಲಿದ್ದು, ಹೀಗಾಗಿ ಆಟಗಾರರು ತಮ್ಮ ಪತ್ನಿಯರ ಜೊತೆ ಕರ್ವಾ ಚೌತ್ ಆಚರಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಆದರೆ ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ದಂಪತಿ ತಂತ್ರಜ್ಞಾನದ ಬಳಕೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಈ ಆಚರಣೆ ನೆರವೇರಿಸಿದ್ದಾರೆ.

ಕರ್ವಾ ಚೌತ್ ದಿನದಂದು ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮಾ, ಪರಸ್ಪರ ವಿಡಿಯೋ ಕಾಲ್ ಮಾಡಿಕೊಂಡಿದ್ದು, ಪತಿಯ ಮುಖದರ್ಶನ ಹಾಗೂ ಚಂದ್ರ ದರ್ಶನ ಬಳಿಕ ಧನಶ್ರೀ ನೀರು ಸೇವಿಸಿದ್ದಾರೆ. ಸಾಮಾಜಿಕ ಜಾಲತಾಣ instagram ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, ಸಕತ್ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...