ಸೆಕ್ಸ್ ಜೀವನದ ಒಂದು ಭಾಗ. ದಾಂಪತ್ಯ ಗಟ್ಟಿಯಾಗಿರಲು ಇದು ಅತ್ಯಗತ್ಯ. ಆದ್ರೆ ಇದೇ ಸೆಕ್ಸ್ ಜೀವನದಲ್ಲಿ ಕೆಲವೊಂದು ಬದಲಾವಣೆ ತರುತ್ತದೆ. ಇದಕ್ಕೆ ಆಸ್ಟ್ರೇಲಿಯಾದ ಪ್ರಸಿದ್ಧ ಮಾಡೆಲ್ ಅಮರಂಥಾ ರಾಬಿನ್ಸನ್ ಉತ್ತಮ ನಿದರ್ಶನ.
ಅಮರಂಥಾ ರಾಬಿನ್ಸನ್, ತನ್ನ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಸೆಕ್ಸ್ ನಿಂದ ಮೂರು ವರ್ಷ ದೂರವಿದ್ದವಳು ಏನೆಲ್ಲ ಅನುಭವಿಸಿದ್ದಾಳೆಂಬುದುನ್ನು ಹೇಳಿದ್ದಾಳೆ.
ಕಡಿಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ಗಳಿಸಿ 3 ಲಕ್ಷ ರೂ.
2016ರ ಸಮಯದಲ್ಲಿ 30 ವರ್ಷದವಳಿದ್ದ ಅಮರಂಥಾ ರಾಬಿನ್ಸನ್, ಅನೇಕ ಪುರುಷರ ಜೊತೆ ಸಂಬಂಧ ಹೊಂದಿದ್ದಳಂತೆ. ಆದ್ರೆ ಕೆಲವೇ ಸಮಯ ಪುರುಷರು ಆಕೆ ಜೊತೆಗಿರ್ತಿದ್ದರಂತೆ. ದೈಹಿಕ ಸುಖ ಸಿಕ್ಕ ತಕ್ಷಣ ಪುರುಷರು ದೂರವಾಗ್ತಾರೆ ಎಂಬ ಬೇಸರದಲ್ಲಿದ್ದ ಅಮರಂಥಾ ರಾಬಿನ್ಸನ್, ತನ್ನೆಲ್ಲ ಸಮಸ್ಯೆಗೆ ಇದೇ ಕಾರಣ ಎಂದುಕೊಂಡಿದ್ದಳಂತೆ. ಸೆಕ್ಸ್ ಗೆ ಖಳನಾಯಕ ಪಟ್ಟ ನೀಡಿದ್ದ ಅಮರಂಥಾ ರಾಬಿನ್ಸನ್, ಅದ್ರಿಂದ ದೂರವಿರಲು ನಿರ್ಧರಿಸಿದ್ದಳಂತೆ.
ನಟಿ ದೀಪಿಕಾ ಪಡುಕೋಣೆಯನ್ನು ಹಾಡಿಹೊಗಳಿದ ಮಾಜಿ ಬಾಯ್ ಫ್ರೆಂಡ್
ಎರಡು ವರ್ಷಗಳ ಕಾಲ ಅಮರಂಥಾ ರಾಬಿನ್ಸನ್ ಆರಾಮವಾಗಿಯೇ ಇದ್ದಳಂತೆ. ಚರ್ಚ್ ಗೆ ಹೋಗಲು ಕಲಿತಿದ್ದ ಅಮರಂಥಾ ರಾಬಿನ್ಸನ್, ನಿಯಂತ್ರಣ ಕಲಿತಿದ್ದಳಂತೆ. ಆದ್ರೆ ಮೂರನೇ ವರ್ಷ, ಜೀವನದಲ್ಲಿ ಏನೋ ಕಳೆದುಕೊಳ್ಳುತ್ತಿರುವ ಅನುಭವವಾಗಿತ್ತಂತೆ. ಜೀವನದಲ್ಲಿ ರೊಮ್ಯಾನ್ಸ್ ಸತ್ತಿದೆ ಎನ್ನಿಸುತ್ತಿತ್ತಂತೆ. ಈ ಮಧ್ಯೆ ಐಲ್ಯಾಂಡ್ ಪುರುಷನ ಜೊತೆ ಮತ್ತೆ ಡೇಟ್ ಗೆ ಹೋದ ಅಮರಂಥಾ ರಾಬಿನ್ಸನ್ ಗೆ ಹೊಸ ಅನುಭವವಾಗಿತ್ತಂತೆ. ತನ್ನನ್ನು ತಾನು ಸಾಕಷ್ಟು ಅರಿತಿದ್ದೆ. ಜೀವನದಲ್ಲಿ ಯಾವುದನ್ನೂ ಕಳೆದುಕೊಳ್ಳಬಾರದು ಎಂಬುದು ಗೊತ್ತಾಗಿದೆ. ಸೆಕ್ಸ್ ಹಾಗೂ ನನ್ನ ಕೆಲಸವನ್ನು ನಾನು ಪ್ರತ್ಯೇಕಾಗಿ ನೋಡ್ತಿದ್ದೇನೆ. ಪ್ರತಿ ಕ್ಷಣ ಎಂಜಾಯ್ ಮಾಡಲು ಕಲಿತಿದ್ದೇನೆಂದು ಅಮರಂಥಾ ರಾಬಿನ್ಸನ್ ಹೇಳಿದ್ದಾಳೆ.