alex Certify ವಿಐಪಿಗಳ ಬದಲು ಬೀದಿ ಮಕ್ಕಳಿಂದ ದುರ್ಗಾ ಪೆಂಡಾಲ್ ಉದ್ಘಾಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಐಪಿಗಳ ಬದಲು ಬೀದಿ ಮಕ್ಕಳಿಂದ ದುರ್ಗಾ ಪೆಂಡಾಲ್ ಉದ್ಘಾಟನೆ

ದಕ್ಷಿಣ ಕೋಲ್ಕತ್ತಾದ ದುರ್ಗಾಪೂಜಾ ಪೆಂಡಾಲ್ ದುರ್ಗೆಯನ್ನು ಸ್ವಾಗತಿಸಲು ಬೀದಿ ಮಕ್ಕಳನ್ನು ಆಹ್ವಾನಿಸಿ ಹೊಸ ಪರಂಪರೆಗೆ ನಾಂದಿ ಹಾಡಿದೆ.

ಟ್ರೈಕಾನ್ ಪಾರ್ಕ್ ಸರ್ಬೋಜನಿನ್ ದುರ್ಗೋತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಪ್ರಸಿದ್ಧ ಸೆಲೆಬ್ರಿಟಿಗಳ ಬದಲಿಗೆ ಮೂವರು ಬೀದಿ ಮಕ್ಕಳು ಪೂಜಾ ಮಂಟಪವನ್ನು ಉದ್ಘಾಟಿಸಿದರು.

ಈ ಗೆಸ್ಚರ್ ಸಾರ್ವಜನಿಕ ವಲಯದಲ್ಲಿ‌ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ ಮತ್ತು ಈ ಹಬ್ಬದ ಸೀಸನ್‌ನಲ್ಲಿ ಈ ಪೂಜಾ ಪೆಂಡಾಲ್ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿದೆ.

ತ್ರಿಕೋನ್ ಪಾರ್ಕ್ ದುರ್ಗೋತ್ಸವ ಸಮಿತಿಯ ಅಧ್ಯಕ್ಷ ಪಾರ್ಥ ಪ್ರತಿಮ್ ರಾಯ್ ಈ ಬಗ್ಗೆ ಮಾತನಾಡಿ, 73ನೇ ವರ್ಷದ ತ್ರಿಕೋನ ಪಾರ್ಕ್ ದುರ್ಗೋತ್ಸವ ಪೂಜೆಯಲ್ಲಿ ಮಂಟಪದ ಬಾಗಿಲ ಉದ್ಘಾಟನೆ ಮತ್ತು ಮಾತೆಯ ದುರ್ಗೆಯ ಅನಾವರಣವನ್ನು ಸ್ಥಳೀಯ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಂದ ನೆರವೇರಿಸಲಾಯಿತು ಎಂದು ವಿವರಿಸಿದ್ದಾರೆ.

ಈ ಮಕ್ಕಳು ಜಾದವ್‌ಪುರ ರೈಲು ನಿಲ್ದಾಣದ ಸುತ್ತಮುತ್ತಲಿನ ಟೆಂಟ್ ಹೌಸ್‌ನಿಂದ ಬಂದವರು.

ಈ ವರ್ಷ, ಪೆಂಡಾಲ್‌ನ ಥೀಮ್ ಉತ್ತರಾನ್ ಆಗಿದೆ. ಕಲಾವಿದರಾದ ದೇಬಜಿತ್ ಚಕ್ರವರ್ತಿ ಮತ್ತು ಸುಬ್ರತಾ ಸಹಾ ಅವರಿಂದ ಪರಿಕಲ್ಪನೆಗೊಂಡ ಕಲಾಕೃತಿ ಹಲವಾರು ಅಡೆತಡೆಗಳ ನಡುವೆಯೂ ಮಾನವೀಯತೆಯ ಕೊನೆಯಿಲ್ಲದ ಕೆಚ್ಚೆದೆಯ ಹೋರಾಟವನ್ನು ಚಿತ್ರಿಸುತ್ತದೆ.

ಕೋಲ್ಕತ್ತಾದ ಕೊಳೆಗೇರಿಯ 300 ಜನರಿಗೆ ಬಟ್ಟೆಗಳನ್ನು ನೀಡುತ್ತೇವೆ ಮತ್ತು ಅಷ್ಟಮಿಯಂದು ನಾವು 200 ಸ್ಲಂ ನಿವಾಸಿಗಳಿಗೆ ಆಹಾರವನ್ನು ನೀಡುತ್ತೇವೆ, ಜೊತೆಗೆ ಸ್ಥಳೀಯ ಭಕ್ತರಿಗೆ ಪ್ರಸಾದವನ್ನು ವಿತರಿಸುತ್ತೇವೆ ಎಂದು ಪೂಜಾ ಸಮಿತಿಯ ಕಾರ್ಯದರ್ಶಿ ದೇಬಾಶಿಶ್ ಸರ್ಕಾರ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...