alex Certify ‘ವಾಶ್ ರೂಂ’ಗೆ ಹೋಗಿದ್ದರಿಂದ ಪ್ರಾಣ ಉಳಿಯಿತು : ಭಯಾನಕ ಅನುಭವ ಬಿಚ್ಚಿಟ್ಟ ‘ಯುವತಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ವಾಶ್ ರೂಂ’ಗೆ ಹೋಗಿದ್ದರಿಂದ ಪ್ರಾಣ ಉಳಿಯಿತು : ಭಯಾನಕ ಅನುಭವ ಬಿಚ್ಚಿಟ್ಟ ‘ಯುವತಿ’

ಒಡಿಶಾ ಭೀಕರ ರೈಲು (train accident) ಅಪಘಾತದಲ್ಲಿ ಬದುಕುಳಿದವರು ಅಪಘಾತದ ಭೀಕರತೆ ಬಗ್ಗೆ ಬಿಚ್ಚಿಟ್ಟಿದ್ದಾರೆ. ವಂದನಾ ಎಂಬ ಯುವತಿಯೊಬ್ಬರು ತಾನು ಹೇಗೆ ಬದುಕಿ ಬಂದೆ ಎಂಬ ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರೈಲು ಅಪಘಾತ ನಡೆಯುವ ಸಂದರ್ಭದಲ್ಲಿ ನಾನು ವಾಶ್ ರೂಂಗೆ ಹೋಗಿದ್ದೆ, ಆದ್ದರಿಂದ ನನ್ನ ಪ್ರಾಣ ಉಳಿಯಿತು. ಜೋರಾದ ಶಬ್ಬ ಕೇಳಿಬಂತು. ವಾಶ್ ರೂಂ (wash room) ನಿಂದ ಹೊರ ಬಂದು ನೋಡಿದರೆ ನನಗೆ ಶಾಕ್ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಹಲವರು ಗಾಯಗಳಿಂದ ನರಳುತ್ತಿದ್ದರು. ಒಬ್ಬರ ಮೇಲೆ ಒಬ್ಬರು ಬಿದ್ದಿದ್ದರು. ನನ್ನ ಸುತ್ತಮುತ್ತಾ ಬಿದ್ದಿದ್ದ ಹೆಣದ ರಾಶಿ (dead body) ಕಂಡು ನಾನು ಶಾಕ್ ಆದೆ ಎಂದರು.

ಶುಕ್ರವಾರ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ( train accident) ಮೃತಪಟ್ಟವರ ಸಂಖ್ಯೆ 207 ಕ್ಕೆ ಏರಿಕೆಯಾಗಿದೆ, 900 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ (Defense work)ಭರದಿಂದ ಸಾಗುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ರೈಲು ದುರಂತದಲ್ಲಿ ಮೃತಪಟ್ಟವರ ಬಗ್ಗೆ ಮಾಹಿತಿ ಪಡೆಯಲು ಸಹಾಯವಾಣಿ (helpline) ಸ್ಥಾಪಿಸಲಾಗಿದ್ದು, ಈ ಕೆಳಕಂಡ ಸಹಾಯವಾಣಿ ಸಂಪರ್ಕಿಸಲು ಕೋರಲಾಗಿದೆ.
ಶಾಲಿಮಾರ್-9332392339
ಖರಗ್ಪುರ-8972073925
ಬಂಗಾರಪೇಟೆ – 08153 255253
ಬಾಲಸೋರ್- 8249591559
ಹೌರಾ- 033-26382217
ಕುಪ್ಪಂ – 8431403419
ಬೆಂಗಳೂರು – 080-22356409
ವಿಶ್ವೇಶ್ವರ ಟರ್ಮಿನಲ್ ಬೈಯಪ್ಪನಹಳ್ಳಿ : 09606005129
ಕೆಆರ್ ಪುರಂ – 88612 03980

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...