alex Certify ವಾರದ ಮೊದಲ ದಿನವೇ ಷೇರು ಪೇಟೆಯಲ್ಲಿ ಕುಸಿತ: 2000 ಅಂಕಗಳಿಂದ ಕುಸಿದ ಸೆನ್ಸೆಕ್ಸ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರದ ಮೊದಲ ದಿನವೇ ಷೇರು ಪೇಟೆಯಲ್ಲಿ ಕುಸಿತ: 2000 ಅಂಕಗಳಿಂದ ಕುಸಿದ ಸೆನ್ಸೆಕ್ಸ್..​..!

ವಾರದ ಆರಂಭದ ದಿನವಾದ ಇಂದೇ ಷೇರು ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದು ಆರ್ಥಿಕ ತಜ್ಞರು ಇದನ್ನು ಬ್ಲ್ಯಾಕ್​ ಮಂಡೇ ಎಂದಿದ್ದಾರೆ. ಬಿಎಸ್​ಇ ಸೆನ್ಸೆಕ್ಸ್​​​ ಇಂದು 2000ಕ್ಕೂ ಅಧಿಕ ಅಂಕಕ್ಕೆ ಕುಸಿದಿದೆ. ಸೆನ್ಸೆಕ್ಸ್​ ಹಾಗೂ ನಿಫ್ಟಿಗಳೆರಡೂ ಶೇಕಡಾ 3-3 ಕುಸಿತದೊಂದಿಗೆ ವಹಿವಾಟನ್ನು ನಡೆಸುತ್ತಿವೆ.

ಷೇರು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳು ಇಲ್ಲಿವೆ ನೋಡಿ :

ಮಿಡ್​ ಕ್ಯಾಪ್​ ಸೂಚ್ಯಂಕವು ಕಳೆದ 9 ತಿಂಗಳ ಅವಧಿಯಲ್ಲಿಯೇ ಅತೀ ಹೆಚ್ಚು ಕುಸಿತ ಕಂಡಿದೆ. ನಿಫ್ಟಾ ಇಂಟ್ರಾ ಡೇನಲ್ಲಿ 17000ಕ್ಕಿಂತ ಕಡಿಮೆಗೆ ಕುಸಿದಿದೆ.

ಹಾಗೂ ನಿಫ್ಟಿ ಕಳೆದ ವರ್ಷದ ಡಿಸೆಂಬರ್ 27ರ ಬಳಿಕ ಇದೇ ಮೊದಲ ಬಾರಿಗ 17 ಸಾವಿರಕ್ಕಿಂತ ಕಡಿಮೆಯಾಗಿದೆ. ಏಪ್ರಿಲ್​ 2021ರಿಂದ ನಿಫ್ಟಿ ಇಂಡ್ರಾ ಡೇನಲ್ಲಿ ಇದೊಂದು ಅತೀದೊಡ್ಡ ಕುಸಿತ ಎನಿಸಿದೆ.

ನಿಫ್ಟಿ 620 ಪಾಯಿಂಟ್​ಗಳಿಂದ ಭರ್ಜರಿ ಕುಸಿತ ಕಂಡಿದೆ. ಹಾಗೂ ಇದು 16,997.85ಕ್ಕೆ ಕುಸಿತ ಕಂಡಿದೆ. ಅಂದರೆ ನಿಫ್ಟಿ 17000ಕ್ಕಿಂತ ಕಡಿಮೆಯಾಗಿದೆ. ಸೆನ್ಸೆಕ್ಸ್​ನಲ್ಲಿ 2000 ಅಂಕಗಳ ಭಾರೀ ಕುಸಿತವು ದಾಖಲಾಗಿದೆ.

ಮಧ್ಯಾಹ್ನ 2:13ರ ಸುಮಾರಿಗೆ ಸೆನ್ಸೆಕ್ಸ್​​ 1960.53 ಅಂಕ ಅಂದರೆ 3.32 ಶೇಕಡಾ ಕುಸಿದ ಪರಿಣಾಮ 57,076.65ರಲ್ಲಿ ವಹಿವಾಟನ್ನು ನಡೆಸುತ್ತಿದೆ. ನಿಫ್ಟಿ 597. 70 ಅಂಕ ಅಥವಾ 3.39 ಶೇಕಡಾಗೆ ಕುಸಿದು 17, 019ಕ್ಕೆ ಕುಸಿತ ಕಂಡಿದೆ.

ಇಂದು ಷೇರು ಮಾರುಕಟ್ಟೆ ಪತನವಾದ ಪರಿಣಾಮ ಮಾರುಕಟ್ಟೆ ಬಂಡವಾಳದಲ್ಲಿ ಹೂಡಿಕೆದಾರರ ಒಟ್ಟು 8 ಲಕ್ಷ ಕೋಟಿ ರೂಪಾಯಿಗಳು ಮುಳುಗಿದೆ. ಶುಕ್ರವಾರದಂದು ಮಾರುಕಟ್ಟೆ ಬಂಡವಾಳ 270 ಲಕ್ಷ ಕೋಟಿಗಳಷ್ಟಿತ್ತು. ಇಂದು ಇದು 262 ಲಕ್ಷ ಕೋಟಿಗೆ ಇಳಿಕೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...