alex Certify ವಾಟ್ಸಾಪ್ ಮೂಲಕ ಯುವತಿ ಅಶ್ಲೀಲ ಫೋಟೋ; ಯುವಕನ ವಿರುದ್ಧ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಮೂಲಕ ಯುವತಿ ಅಶ್ಲೀಲ ಫೋಟೋ; ಯುವಕನ ವಿರುದ್ಧ ದೂರು

ಯುವತಿಯೊಬ್ಬಳು ತನ್ನೊಂದಿಗೆ ಸಲುಗೆಯಿಂದಿದ್ದ ವೇಳೆ ತೆಗೆದುಕೊಂಡಿದ್ದ ಫೋಟೋಗಳನ್ನು ಆಕೆಯ ಚಿಕ್ಕಮ್ಮನ ಮೊಬೈಲಿಗೆ ವಾಟ್ಸಾಪ್ ಮೂಲಕ ಕಳುಹಿಸಿದ ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೊರಬದ ಇಸಾಕ್ ವಿರುದ್ಧ 24 ವರ್ಷದ ಯುವತಿ ದೂರು ನೀಡಿದ್ದು, ಈಕೆ ಆತನ ಜೊತೆ ಈ ಹಿಂದೆ ಆತ್ಮೀಯವಾಗಿದ್ದ ವೇಳೆ ಫೋಟೋಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.

ಆದರೆ ಯುವತಿಗೆ ಮದುವೆ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಇಸಾಕ್ ಜೊತೆ ಮಾತನಾಡುವುದನ್ನು ಆಕೆ ನಿಲ್ಲಿಸಿದ್ದಳು. ಇದರಿಂದ ಆಕ್ರೋಶಗೊಂಡ ಆತ, ಯುವತಿ ಚಿಕ್ಕಮ್ಮನ ಮೊಬೈಲಿಗೆ ವಾಟ್ಸಾಪ್ ಮೂಲಕ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...