alex Certify ವಾಟ್ಸಾಪ್‌ ಸಂಸ್ಥಾಪಕರಿಂದ ಬಳಕೆದಾರರಿಗೆ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್‌ ಸಂಸ್ಥಾಪಕರಿಂದ ಬಳಕೆದಾರರಿಗೆ ಮಹತ್ವದ ಹೇಳಿಕೆ

ಜನ ಸಾಮಾನ್ಯರು ಸರ್ವೇಸಾಮಾನ್ಯವಾಗಿ ಬಳಕೆ ಮಾಡುತ್ತಿರುವ ವಾಟ್ಸಪ್‌ನ ಖಾಸಗಿತನ ಅಥವಾ ಗೌಪ್ಯತೆ ಹಾಗೂ ಭದ್ರತೆಗೆ ಇನ್ನೊಂದಷ್ಟು ಕ್ರಮಗಳಾಗುತ್ತಿದೆ.

ಫೇಸ್‌ಬುಕ್ ಮಾಸ್ಟರ್ ಮಾರ್ಕ್ ಝೂಕರ್ ಬರ್ಗ್ ಅವರು ಈ ಕುರಿತಂತೆ ತಮ್ಮ ಖಾತೆಯಿಂದ ಸಂದೇಶ ಪ್ರಕಟಿಸಿದ್ದು, ಯಾವ ಉದ್ದೇಶಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂಬುದರ ಸುಳಿವನ್ನೂ ಬಿಟ್ಟುಕೊಟ್ಟಿದ್ದಾರೆ.

ವಾಟ್ಸಪ್ ಬಳಕೆದಾರರು ಗೂಗಲ್ ಡ್ರೈವ್ ಅಥವಾ ಐ ಕ್ಲೌಡ್‌ನಲ್ಲಿ ಬ್ಯಾಕಪ್ ಸಂಗ್ರಹಿಸಲು ಪೂರಕವಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಆಯ್ಕೆಗೆ ಅವಕಾಶ ಮಾಡಿಕೊಡಲಾಗುತ್ತದೆ.

ಈ ಪ್ರಕ್ರಿಯೆ ಆರಂಭವಾದಕೂಡಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಮತ್ತು ಬ್ಯಾಕಪ್‌ಗಳನ್ನು ನೀಡುವ ಮೊದಲ ಜಾಗತಿಕ ಸಂದೇಶ ಸೇವೆಯಾಗಿದೆ ಎಂದು ಜೂಕರ್ ಬರ್ಗ್ ಹೇಳಿಕೊಂಡಿದ್ದಾರೆ.

ಕುಡಿದ ಮತ್ತಿನಲ್ಲಿ ಸೇನಾ ವಾಹನ ತುಳಿದು ಯುವತಿಯ ದುರ್ವರ್ತನೆ: ವಿಡಿಯೋ ವೈರಲ್

ಆಪರೇಟಿಂಗ್ ಸಿಸ್ಟಂಗಳಲ್ಲಿ ಕೀ ಸ್ಟೋರೇಜ್ ಮತ್ತು ಕ್ಲೌಡ್ ಸ್ಟೋರೇಜ್‌ಗಾಗಿ ಹೊಸ ಫ್ರೇಮ್‌ವರ್ಕ್ ಅಗತ್ಯವಿದೆ. ಇದು ನಿಜವಾಗಿಯೂ ಕಠಿಣ ತಾಂತ್ರಿಕ ಸವಾಲು ಎಂದು ವಿವರಿಸಿದ್ದಾರೆ.

ನಾವು ಈ ಕಾರ್ಯ ಯಾವರೀತಿ ಮಾಡಿದ್ದೇವೆ ಎಂಬ ಕುತೂಹಲವುಳ್ಳವರಿಗೆ ತಿಳಿದುಕೊಳ್ಳಲು, ಪರೀಕ್ಷಿಸಲು ಎಲ್ಲಾ ತಾಂತ್ರಿಕ ವಿವರಗಳೊಂದಿಗೆ ವೇಟ್ ಪೇಪರ್ ಮತ್ತು ಇಂಜಿನಿಯರಿಂಗ್ ಬ್ಲಾಗ್ ಮೂಲಕ ಪ್ರಕಟಿಸಿದ್ದೇವೆ, ಅಗತ್ಯ ಇರುವವರು ವೀಕ್ಷಿಸಬಹುದು ಎಂದು ಆಹ್ವಾನ ನೀಡಿದ್ದಾರೆ ಜೂಕರ್ ಬರ್ಗ್.

ಅಂದಹಾಗೆ, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಎಂದರೆ ಸಂವಹನ ನಡೆಸುವ ಬಳಕೆದಾರರು ಮಾತ್ರ ಸಂದೇಶಗಳನ್ನು ಓದಬಹುದು. ಇದು ಸಂಭಾವ್ಯ ಕದ್ದಾಲಿಕೆ ತಡೆಯುತ್ತದೆ. ಟೆಲಿಕಾಂ ಪೂರೈಕೆದಾರರಾಗಲಿ, ಇಂಟರ್ನೆಟ್ ಪೂರೈಕೆದಾರರು ಮತ್ತು ಸಂವಹನ ಸೇವೆಯ ಪೂರೈಕೆದಾರರೂ ಸಹ ಬಳಕೆದಾರರ ಸಂಭಾಷಣೆಯನ್ನು ಡೀಕ್ರಿಪ್ಟ್ ಮಾಡಲು ಬೇಕಾದ ಕ್ರಿಪ್ಟೋಗ್ರಾಫಿಕ್ ಕೀಗಳನ್ನು ಪ್ರವೇಶಿಸಲು ಸಾಧ್ಯವಾಗದು.

ಸಂದೇಶ ಕಳುಹಿಸುವವರು ಮತ್ತು ಸ್ವೀಕರಿಸುವವರು ಹೊರತುಪಡಿಸಿ ಡೇಟಾವನ್ನು ಓದಲು ಅಥವಾ ರಹಸ್ಯವಾಗಿ ಮಾರ್ಪಡಿಸುವಿಕೆ ತಡೆಯುವುದು ಇದರ ಉದ್ದೇಶವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...