alex Certify ವರನ ಶೂ ವಾಪಸ್ ನೀಡಲು ಚಕ್ರವಾಟವಾಡಿದ ನಾದಿನಿಯರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರನ ಶೂ ವಾಪಸ್ ನೀಡಲು ಚಕ್ರವಾಟವಾಡಿದ ನಾದಿನಿಯರು…..!

Viral Video: Sisters-in-Law Play Spin The Wheel Game With Groom to Demand Money During Joota-Chupai | Watchಭಾರತೀಯ ವಿವಾಹ ಅಂದ್ರೆ ಅಲ್ಲಿ ಹಾಸ್ಯ, ವಿನೋದ, ತಮಾಷೆ, ಸಂತೋಷ ಎಲ್ಲವೂ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಕ್ರೇಜಿ ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲೂ ವಧುವಿನ ಅಕ್ಕ-ತಂಗಿಯರು ಭಾವ (ಮದುಮಗ)ನಿಗೆ ಏನಾದ್ರೂ ಕೀಟಲೆ ಮಾಡುತ್ತಿರುತ್ತಾರೆ. ಇದೀಗ ಇಂಥದ್ದೇ ಕೀಟಲೆಯ ವಿಡಿಯೋ ಜನರನ್ನು ರಂಜಿಸಿದೆ.

ಹೌದು ಭಾವ-ನಾದಿನಿಯರ ಮೋಜಿನ ವಿಡಿಯೋ ವೈರಲ್ ಆಗಿದ್ದು, ಜನರನ್ನು ರಂಜಿಸುತ್ತಿದೆ. ಮೇಲೆ ಹೇಳಿದಂತೆ ಭಾವ-ನಾದಿನಿಯರ ಸಂಬಂಧವು ಕೀಟಲೆ ಮತ್ತು ಕಾಲು ಎಳೆಯುವಿಕೆಯಿಂದ ತುಂಬಿದ್ದು, ಇದೊಂದು ವಿಶೇಷ ಬಂಧವಾಗಿದೆ. ಸಹಜವಾಗಿಯೇ ಮದುವೆಯಲ್ಲಿ ಕಿಡಿಗೇಡಿತನ ಮತ್ತು ಹಾಸ್ಯಗಳು ಹೆಚ್ಚಿರುತ್ತದೆ. ಅದರಲ್ಲೂ ವಿಶೇಷವಾಗಿ ಶೂ-ಕದಿಯುವ ಆಚರಣೆಯ ಸಮಯದಲ್ಲಿ ಬೂಟುಗಳನ್ನು ಹಿಂದಿರುಗಿಸಬೇಕೆಂದ್ರೆ ತಮ್ಮ ಭಾವನ ಕೈಯಿಂದ ನಾದಿನಿಯರು ಹಣಕ್ಕೆ ಬೇಡಿಕೆಯಿಡುತ್ತಾರೆ.

ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ವರನ ಬೂಟುಗಳನ್ನು ಹಿಂದಿರುಗಿಸಲು ಹಣಕ್ಕಾಗಿ ಬೇಡಿಕೆಯಿಡಲು ನಾದಿನಿಯರು ವಿಭಿನ್ನ ಮಾರ್ಗವನ್ನು ಕಂಡುಕೊಂಡಿದ್ದಾರೆ. ಸ್ಪಿನ್ ವೀಲ್ ಅನ್ನು ಅವರು ಸಿದ್ಧಪಡಿಸಿದ್ದಾರೆ. ಪ್ರತಿ ಮಾರ್ಕ್ನಲ್ಲಿ ನಿರ್ದಿಷ್ಟ ಪ್ರಮಾಣದ ಹಣವನ್ನು ಬರೆಯಲಾಗಿದೆ. ನಂತರ ಚಕ್ರವನ್ನು ತಿರುಗಿಸುವಂತೆ ಭಾವನಲ್ಲಿ ಕೇಳಿಕೊಳ್ಳುತ್ತಾರೆ. ಅವನು ಚಕ್ರವನ್ನು ತಿರುಗಿಸಿದ ತಕ್ಷಣ ಎಷ್ಟು ಮೊತ್ತದತ್ತ ಚಕ್ರ ನಿಲ್ಲುತ್ತದೆ ಎಂಬಲ್ಲಿ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಮತ್ತು ಚಕ್ರವು ಅಂತಿಮವಾಗಿ 90,000 ರೂಪಾಯಿಗೆ ನಿಂತಿದೆ.

ವಿಡಿಯೋವನ್ನು ವೆಡ್ ಅಬೌಟ್ ಎಂಬ ಇನ್‌ಸ್ಟಾಗ್ರಾಮ್ ಪುಟವು ಹಂಚಿಕೊಂಡಿದೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ಪರಿಕಲ್ಪನೆಯನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್‌ ವಿಭಾಗವನ್ನು ಹೃದಯ ಮತ್ತು ಪ್ರೀತಿಯ ಎಮೋಜಿಗಳೊಂದಿಗೆ ತುಂಬಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...