
ರಿಪೋರ್ಟರ್ ವರದಿ ಮಾಡುತ್ತಿರುವ ರೀತಿ ಟ್ವಿಟ್ಟರ್ನಲ್ಲಿ ಹಲವಾರು ಮೀಮ್ಗಳನ್ನು ಸೃಷ್ಟಿಸಲಾಗಿದೆ. ಅನೇಕ ಜನಪ್ರಿಯ ಬಾಲಿವುಡ್ ಹಾಡುಗಳನ್ನು ಈ ವಿಡಿಯೋಗೆ ಸೇರಿಸಲಾಗಿದೆ. ಯುದ್ಧದಿಂದ ಹಾನಿಗೊಳಗಾದ ಉಕ್ರೇನ್ನಿಂದ ಆಕೆ ವರದಿ ಮಾಡುತ್ತಿದ್ದಳು.
ವರದಿ ಮಾಡುವಾಗ ಕೆಲವು ನಾಟಕೀಯ ಸನ್ನೆಗಳೊಂದಿಗೆ ಸುದ್ದಿಯನ್ನು ಪ್ರಸ್ತುತಪಡಿಸಿದ್ದಾರೆ. ಈ ವೇಳೆ ಹೆಲಿಕಾಪ್ಟರ್ ಗ್ರಾಫಿಕ್ಸ್ ಅನ್ನು ಕೂಡ ಸೇರಿಸಲಾಗಿದೆ. ಈ ವಿಡಿಯೋವನ್ನು ನೆಟ್ಟಿಗರು ತಮಾಷೆಯಾಗಿ ಕಂಡಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ಮೀಮ್ ಗಳ ಸುರಿಮಳೆಯನ್ನೇ ಸೃಷ್ಟಿಸಿದ್ದಾರೆ.
ಇನ್ನು, ನಾಯಕರ ನಿರ್ಧಾರಗಳಿಗೆ ತಲೆಕೊಡದೆ ಶೀಘ್ರವಾಗಿ ಶಸ್ತ್ರಗಳನ್ನು ತ್ಯಜಿಸಿ ಮಾತುಕತೆಗೆ ಬರುವಂತೆ ಉಕ್ರೇನ್ ಪಡೆಗಳಿಗೆ ರಷ್ಯಾ ಕರೆ ನೀಡಿದೆ. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ, ಮಾರಿಯುಪೋಲ್ ರಕ್ಷಣೆಗೆ ನಿಂತಿರುವ ಉಕ್ರೇನ್ ಯೋಧರು ಶಸ್ತ್ರ ತ್ಯಜಿಸಿ ಮಾತುಕತೆಗೆ ಬಂದರೆ ಸ್ವಾಗತಿಸುವುದಾಗಿ ಹೇಳಿದೆ.