alex Certify ವಯಸ್ಸು 46 ಆದರೂ ಮದುವೆಯಾಗದೇ ಉಳಿದಿದ್ದಕ್ಕೆ ಕಾರಣ ಬಿಚ್ಚಿಟ್ಟಿದ್ದಾಳೆ ಮಾಜಿ ವಿಶ್ವ ಸುಂದರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸು 46 ಆದರೂ ಮದುವೆಯಾಗದೇ ಉಳಿದಿದ್ದಕ್ಕೆ ಕಾರಣ ಬಿಚ್ಚಿಟ್ಟಿದ್ದಾಳೆ ಮಾಜಿ ವಿಶ್ವ ಸುಂದರಿ

ನಟಿ ಸುಶ್ಮಿತಾ ಸೇನ್‌ರದ್ದು ಮಾತು ನಡೆ ನುಡಿ ಎಲ್ಲವೂ ನೇರಾ ನೇರ. ಇತ್ತೀಚೆಗೆ ಟ್ವಿಂಕಲ್ ಖನ್ನಾ ನಡೆಸಿಕೊಡುವ ಕಾರ್ಯಕ್ರಮ ಟ್ವೀಕ್ ಇಂಡಿಯಾದಲ್ಲಿ ಸುಶ್ಮಿತಾ ಕಾಣಿಸಿಕೊಂಡಿದ್ರು. ಮದುವೆ, ಪ್ರೀತಿ, ಜೀವನದಲ್ಲಿ ತೆಗೆದುಕೊಂಡ ಕೆಟ್ಟ ನಿರ್ಧಾರಗಳು ಇವೆಲ್ಲದರ ಬಗೆಗೂ ಸುಷ್ಮಿತಾ ಮನಬಿಚ್ಚಿ ಮಾತನಾಡಿದ್ದಾರೆ.

ಜನಪ್ರಿಯ ಪುರುಷರೇ ತಾವು ವರ್ಜಿನ್‌ ಅಂತಾ ಹೇಳಿಕೊಳ್ತಿದ್ದಾರೆ, ಅಂಥದ್ರಲ್ಲಿ ನೀವ್ಯಾಕೆ ಅಫೇರ್‌ಗಳನ್ನ ಮುಚ್ಚಿಡಲಿಲ್ಲ ಎಂಬ ನೇರ ಪ್ರಶ್ನೆಗೆ ಸುಷ್ಮಿತಾ ಬಿಂದಾಸ್‌ ಆಗಿಯೇ ಉತ್ತರ ಕೊಟ್ಟಿದ್ದಾರೆ. ನಮ್ಮತನವನ್ನು ನಾವು ಕಳೆದುಕೊಳ್ಳಬಾರದು, ನನ್ನ ಬದುಕಿನಲ್ಲಿ ಬಂದ ಪುರುಷರು, ವಿವಾಹಿತರು, ಪ್ಲಾಸ್ಟಿಕ್‌ ಸರ್ಜರಿ ಇವ್ಯಾವುದನ್ನೂ ನಾನು ಅದೇ ಕಾರಣಕ್ಕೆ ಗುಟ್ಟಾಗಿ ಇಟ್ಟಿಲ್ಲ ಅಂತಾ ಸುಷ್ಮಿತಾ ಸೇನ್‌ ಹೇಳಿದ್ದಾರೆ.

ನಮ್ಮ ಆಲೋಚನೆಗಳು, ಹೃದಯ ಸಣ್ಣದೇ ಹೊರತೂ ಎದುರಿಗಿರುವವರಲ್ಲ. ನಾವೇನೂ ತಪ್ಪೇ ಮಾಡಿಲ್ಲ ಎಂದಲ್ಲ, ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ ಅಂತಾ ಪ್ರಾಮಾಣಿಕವಾಗಿಯೇ ಒಪ್ಪಿಕೊಂಡಿದ್ದಾರೆ. ಮದುವೆಯಾಗದಿರುವ ತಮ್ಮ ನಿರ್ಧಾರಕ್ಕೂ ತಮ್ಮ ಮಕ್ಕಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸುಷ್ಮಿತಾ ಪ್ರತಿಪಾದಿಸಿದ್ದಾಳೆ.

“ಅದೃಷ್ಟವಶಾತ್ ನಾನು ನನ್ನ ಜೀವನದಲ್ಲಿ ಕೆಲವು ಕುತೂಹಲಕಾರಿ ಪುರುಷರನ್ನು ಭೇಟಿಯಾದೆ, ನಾನು ಎಂದಿಗೂ ಮದುವೆಯಾಗದ ಏಕೈಕ ಕಾರಣವೆಂದರೆ ಅವರು ನಿರಾಸೆಗೊಂಡರು. ಅದಕ್ಕೂ ನನ್ನ ಮಕ್ಕಳಿಗೂ ಯಾವುದೇ ಸಂಬಂಧವಿರಲಿಲ್ಲ. ನನ್ನ ಮಕ್ಕಳು ಎಂದಿಗೂ ಈ ಸಮೀಕರಣದಲ್ಲಿ ಇರಲಿಲ್ಲ. ನನ್ನ ಜೀವನದಲ್ಲಿ ಬಂದವರನ್ನೆಲ್ಲ ನನ್ನ ಮಕ್ಕಳು ಖುಷಿಯಿಂದ ಸ್ವೀಕರಿಸಿದ್ದಾರೆ, ಎಂದಿಗೂ ಕೋಪ ಮಾಡಿಕೊಂಡು ತಿರಸ್ಕರಿಸಲಿಲ್ಲ. ಎಲ್ಲರಿಗೂ ಸಮಾನವಾದ ಪ್ರೀತಿ ಮತ್ತು ಗೌರವವನ್ನು ನೀಡಿದ್ದಾರೆ. ಇದು ಅತ್ಯಂತ ಖುಷಿಯ ವಿಚಾರ ಅಂತಾ ಸುಷ್ಮಿತಾ ಹೆಮ್ಮೆಯಿಂದ ಹೇಳಿಕೊಂಡ್ರು.

ಸುಷ್ಮಿತಾ ಸೇನ್‌ ಹಾಗೂ ರೋಹ್ಮನ್‌ ಶಾಲ್‌ ಸುಮಾರು 3 ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ರು. ಆದ್ರೆ ಕಳೆದ ವರ್ಷ ಇವರ ಮಧ್ಯೆ ಬ್ರೇಕಪ್‌ ಆಗಿದೆ. 2018ರಲ್ಲಿ ರೋಹ್ಮನ್‌ ಶಾಲ್‌ ಸಾಮಾಜಿಕ ಜಾಲತಾಣದ ಮೂಲಕ ಸುಷ್ಮಿತಾಗೆ ಪರಿಚಯವಾಗಿದ್ದ. 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಗೆದ್ದ ನಂತರ ಸುಷ್ಮಿತಾ ಚಿತ್ರರಂಗಕ್ಕೆ ಕಾಲಿಟ್ಟರು. ಸಾಕಷ್ಟು ಸೂಪರ್‌ ಹಿಟ್‌ ಸಿನೆಮಾಗಳಲ್ಲಿ ನಟಿಸಿದ್ದಾರೆ. ವೆಬ್‌ ಸಿರೀಸ್‌ಗಳಲ್ಲೂ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ಸೆಳೆದಿರೋ ಸುಷ್ಮಿತಾ ಫಿಲ್ಮ್‌ಫೇರ್‌ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...