alex Certify ವಯಸ್ಸಿಗೆ ಅನುಗುಣವಾಗಿ ಸಹಜ ರಕ್ತದೊತ್ತಡ(BP) ಎಷ್ಟಿರಬೇಕು ? ಪುರುಷರು-ಮಹಿಳೆಯರಿಗಿದೆ ವಿಭಿನ್ನ ಶ್ರೇಣಿ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸಿಗೆ ಅನುಗುಣವಾಗಿ ಸಹಜ ರಕ್ತದೊತ್ತಡ(BP) ಎಷ್ಟಿರಬೇಕು ? ಪುರುಷರು-ಮಹಿಳೆಯರಿಗಿದೆ ವಿಭಿನ್ನ ಶ್ರೇಣಿ !

ಉದ್ವೇಗ ಮತ್ತು ಅವಸರದ ಜೀವನಶೈಲಿಯಿಂದಾಗಿ ಹೆಚ್ಚಿನ ಜನರು ರಕ್ತದೊತ್ತಡದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ಅಧಿಕ ರಕ್ತದೊತ್ತಡವಿದ್ರೆ ಇನ್ನೊಂದಷ್ಟು ಮಂದಿ ಲೋ ಬಿಪಿ ಸಮಸ್ಯೆಯಿಂದ ತೊಂದರೆಗೊಳಗಾಗಿದ್ದಾರೆ. ದೇಹದಲ್ಲಿ ರಕ್ತದೊತ್ತಡ ಎಷ್ಟಿರಬೇಕು ಗೊತ್ತಾ? ಪುರುಷರು ಮತ್ತು ಮಹಿಳೆಯರಲ್ಲಿ ಈ ಪ್ರಮಾಣ ವಿಭಿನ್ನವಾಗಿರುತ್ತದೆ. ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತದೆ.

120/80 ಅನ್ನು ಸಾಮಾನ್ಯ ರಕ್ತದೊತ್ತಡ ಎಂದು ಪರಿಗಣಿಸಲಾಗುತ್ತದೆ. ಆದರೆ ಇದು ವಯಸ್ಸಿನ ಪ್ರಕಾರ ಪುರುಷರು ಮತ್ತು ಮಹಿಳೆಯರಲ್ಲಿ ಬದಲಾಗುತ್ತದೆ. ವಯಸ್ಸಿನ ಆಧಾರದ ಮೇಲೆ ಸಾಮಾನ್ಯ ರಕ್ತದೊತ್ತಡವು 90/60 ರಿಂದ 145/90ರ ನಡುವೆ ಇರಬಹುದು. ಆದಾಗ್ಯೂ, ಇದು ದೈಹಿಕ ಸ್ಥಿತಿ ಮತ್ತು ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ.

ಸಾಮಾನ್ಯ ರಕ್ತದೊತ್ತಡ ಹೇಗಿರಬೇಕು?

ತಜ್ಞರ ಪ್ರಕಾರ ಪುರುಷರಲ್ಲಿ ರಕ್ತದೊತ್ತಡದ ಮೇಲಿನ ವ್ಯಾಪ್ತಿಯು 90/60 ರಿಂದ 145/90 ವರೆಗೆ ಇರುತ್ತದೆ. ನವಜಾತ ಶಿಶುಗಳ ರಕ್ತದೊತ್ತಡ 90/60 ಇರುತ್ತದೆ. 6 ತಿಂಗಳಿಂದ 2 ವರ್ಷದ ಮಕ್ಕಳಲ್ಲಿ 100/70, 18 ವರ್ಷದೊಳಗಿನವರಲ್ಲಿ 120/80, 40 ವರ್ಷ ವಯಸ್ಸಿನವರೆಗೆ ರಕ್ತದೊತ್ತಡ 135/80 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ 145/90 ವರೆಗೆ ಇರುತ್ತದೆ.  ಬಾಲ್ಯದಲ್ಲಿ ಹುಡುಗಿಯರ ರಕ್ತದೊತ್ತಡವು ಹುಡುಗರಂತೆಯೇ ಇರುತ್ತದೆ. ಹದಿಹರೆಯದ ನಂತರ ಹುಡುಗಿಯರ ರಕ್ತದೊತ್ತಡವು ಹುಡುಗರಿಗಿಂತ ಸ್ವಲ್ಪ ಕಡಿಮೆ ಆಗುತ್ತದೆ.

ಆದರೆ ಋತುಬಂಧದ ನಂತರ ಮಹಿಳೆಯರಲ್ಲಿ ರಕ್ತದೊತ್ತಡವು ಪುರುಷರಿಗಿಂತ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಪುರುಷರು ಮತ್ತು ಮಹಿಳೆಯರ ವಯಸ್ಸಿನೊಂದಿಗೆ, ರಕ್ತದೊತ್ತಡದ ವ್ಯಾಪ್ತಿಯು ಸಹ ಹೆಚ್ಚಾಗುತ್ತದೆ. ಆದರೆ ಇದು ಸಂಪೂರ್ಣವಾಗಿ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ರಕ್ತದೊತ್ತಡ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...