alex Certify ವಯಸ್ಸನ್ನೇ ಮರೆಮಾಚಿ ‘ಸೌಂದರ್ಯ’ವನ್ನು ಡಬಲ್‌ ಮಾಡುತ್ತವೆ ಈ ಸೂಪರ್‌ಫುಡ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಯಸ್ಸನ್ನೇ ಮರೆಮಾಚಿ ‘ಸೌಂದರ್ಯ’ವನ್ನು ಡಬಲ್‌ ಮಾಡುತ್ತವೆ ಈ ಸೂಪರ್‌ಫುಡ್ಸ್

ಯಾವಾಗಲೂ ಯಂಗ್‌ ಆಗಿ, ಸುಂದರವಾಗಿ ಕಾಣಬೇಕು ಅನ್ನೋದು ಎಲ್ಲರ ಆಸೆ. ಅದರಲ್ಲೂ ಮಹಿಳೆಯರು ಸದಾ ತಮ್ಮ ವಯಸ್ಸನ್ನು ಮರೆಮಾಚಲು ಬಯಸುತ್ತಾರೆ. ಇದಕ್ಕಾಗಿ ಹಲವಾರು ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ.

ಆದರೆ ಸೌಂದರ್ಯ ಅನ್ನೋದು ಬಾಹ್ಯವಾದುದ್ದಲ್ಲ, ಅದು ಒಳಗಿನಿಂದ್ಲೇ ಬರಬೇಕು. ಅದರರ್ಥ ನಿಮ್ಮ ಸೌಂದರ್ಯ ಅಡಗಿರೋದು ನೀವು ಸೇವಿಸುವ ಆಹಾರದಲ್ಲಿ. ಚರ್ಮ ಸುಕ್ಕುಗಟ್ಟದಂತೆ, ಹೊಳಪಾಗಿರುವಂತೆ ಮಾಡಲು ಸಹಕಾರಿಯಾಗಿರೋ ಆಹಾರಗಳು ಯಾವುದು ಅನ್ನೋದನ್ನು ನೋಡೋಣ.

ನಿಂಬೆಹಣ್ಣು : ಬೆಳಗ್ಗೆ ನೀವು ಅರ್ಧ ನಿಂಬೆ ರಸವನ್ನು ನೀರಿಗೆ ಹಾಕಿಕೊಂಡು ಕುಡಿಯಿರಿ. ಅಥವಾ ಮೊಳಕೆ ಕಾಳುಗಳಿಗೆ ಹಾಕಿಕೊಂಡು ಸೇವಿಸಬಹುದು. ಮಧ್ಯಾಹ್ನ ಸೇವಿಸುವ ಸಲಾಡ್‌ಗೆ ಹಾಕಿಕೊಳ್ಳಿ. ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ನಿಂಬೆ ರಸ ಸೇವನೆಯಿಂದ ಮುಖದ ಮೇಲಿನ ಕಲೆಗಳು ಮಾಯವಾಗುತ್ತವೆ.

ವಾಲ್ನಟ್ ‌: ಇದರಲ್ಲಿ ಅನೇಕ ಪೋಷಕಾಂಶಗಳಿವೆ. ವಾಲ್ನಟ್‌ ಅನ್ನು ಚರ್ಮಕ್ಕೆ ಅಗತ್ಯವಾದ ಸೂಪರ್‌ ಫುಡ್‌ ಎಂದೇ ಕರೆಯಲಾಗುತ್ತದೆ. ನಿಮ್ಮ ದೇಹಕ್ಕೆ ಅತ್ಯಗತ್ಯವಾದ ಒಮೆಗಾ-3 ಕೊಬ್ಬನ್ನು ಇದು ಒದಗಿಸುತ್ತದೆ. ಈ ಕೊಬ್ಬು ಚರ್ಮದ ಕೋಶಗಳ ಪೊರೆಗಳನ್ನು ಬಲಪಡಿಸುವ ಮೂಲಕ ತೇವಾಂಶ ಮತ್ತು ಪೋಷಕಾಂಶಗಳನ್ನು ಲಾಕ್ ಮಾಡುತ್ತದೆ ಮತ್ತು ವಿಷವನ್ನು ಹೊರಹಾಕುತ್ತದೆ. ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

ಸಿಹಿ ಗೆಣಸು : ಇದು ಆರೋಗ್ಯ ಮತ್ತು ಸೌಂದರ್ಯಕ್ಕೆ ಹೇಳಿ ಮಾಡಿಸಿದಂತಹ ತರಕಾರಿ. ಇದರಲ್ಲಿ ಬೀಟಾ-ಕ್ಯಾರೋಟಿನ್ ಕಂಡುಬರುತ್ತದೆ. ಸಿಹಿ ಗೆಣಸು ಸೇವನೆಯಿಂದ ನಮ್ಮ ಕೂದಲು, ಚರ್ಮ ಮತ್ತು ಉಗುರುಗಳನ್ನು ಪೋಷಿಸಬಹುದು.

ಒಮೆಗಾ -3 ಕೊಬ್ಬಿನಾಮ್ಲಗಳು, ವಿಟಮಿನ್ ಎ, ಬಿ, ಸಿ, ಡಿ, ಇ ಮತ್ತು ಕೆ ಇದರಲ್ಲಿ ಕಂಡುಬರುತ್ತವೆ. ಇವೆಲ್ಲವೂ ನಮ್ಮ ಆರೋಗ್ಯಕ್ಕೆ ಅತ್ಯಂತ ಅವಶ್ಯಕ. ನಮ್ಮ ದೇಹದಲ್ಲಿ ಇರುವ ಫ್ರೀ ರಾಡಿಕಲ್‌ಗಳು ನಮ್ಮನ್ನು ವೃದ್ಧಾಪ್ಯದತ್ತ ಕೊಂಡೊಯ್ಯುತ್ತವೆ. ಆದರೆ ನೀವು ಸಿಹಿ ಗೆಣಸನ್ನು ಸೇವಿಸಿದರೆ, ಅದರಲ್ಲಿರುವ ಆಂಟಿಒಕ್ಸಿಡೆಂಟ್‌ಗಳು ವೃದ್ಧಾಪ್ಯವನ್ನು ತಡೆಯುತ್ತವೆ.

ಯಾವಾಗಲೂ ಯಂಗ್‌ ಆಗಿ ಕಾಣಬೇಕೆಂಬ ಬಯಕೆ ನಿಮ್ಮಲ್ಲಿದ್ದರೆ ಈ ಮೂರು ವಸ್ತುಗಳನ್ನು ನಿಯಮಿತವಾಗಿ ಸೇವಿಸಿ. ವರ್ಷವಿಡೀ ನಿಮ್ಮ ಆಹಾರದಲ್ಲಿ ಇವುಗಳನ್ನು ನೀವು ಸೇರಿಸಿಕೊಳ್ಳಬೇಕು. ಅವು ನಮ್ಮ ಚರ್ಮಕ್ಕೆ ಮಾತ್ರವಲ್ಲ, ಕೂದಲು ಮತ್ತು ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...