ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಅತ್ಯಂತ ಮಹತ್ವದ ಘಟ್ಟ. ಮದುವೆ ಬಗ್ಗೆ ಅಪಾರ ಕನಸು, ನಿರೀಕ್ಷೆಗಳಿರುತ್ತವೆ. ಜೊತೆಗೆ ಅನೇಕ ಜವಾಬ್ಧಾರಿಗಳು ಕೂಡ ಹೆಗಲೇರುವ ಸಮಯ ಅದು. ಹಾಗಾಗಿ ಬದುಕಿನುದ್ದಕ್ಕೂ ನಿಮ್ಮ ಜೊತೆಯಾಗಿರುವವರ ಆಯ್ಕೆ ಸೂಕ್ತವಾಗಿರಬೇಕು.
ಪರಸ್ಪರ ಅರ್ಥ ಮಾಡಿಕೊಳ್ಳುವುದರ ಜೊತೆಗೆ ಪರಸ್ಪರರನ್ನು ಗೌರವಿಸುವುದು ಕೂಡ ಸುಖಮಯ ದಾಂಪತ್ಯ ಬದುಕಿನ ಮೂಲಮಂತ್ರ. ವಿಷ್ಣು ಪುರಾಣದ ಪ್ರಕಾರ ವಧುವಿನ ಹುಡುಕಾಟದಲ್ಲಿರುವ ಪ್ರತಿಯೊಬ್ಬರು ಅತ್ಯಂತ ನಿರ್ಣಾಯಕವಾದ 4 ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಬೆಳಗ್ಗೆ ಬಹಳ ಹೊತ್ತಿನವರೆಗೂ ಮಲಗುವ ಯುವತಿಯನ್ನು ವರಿಸಬೇಡಿ ಅಂತಾ ವಿಷ್ಣುಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಯಾರು ಬೆಳಗ್ಗೆ ಬೇಗ ಏಳುವುದಿಲ್ಲವೋ ಅವರು ತಮ್ಮ ಜವಾಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸುವುದಿಲ್ಲ. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ.
ʼತೂಕʼ ಇಳಿಸಲು ನೆರವಾಗುತ್ತೆ ಸೆಕ್ಸ್ ನ ಈ ವಿಧಾನ
ವಿಷ್ಣು ಪುರಾಣದ ಪ್ರಕಾರ ಶಾಂತ ಸ್ವಭಾವದವಳಲ್ಲದ ಯುವತಿ, ನಿಮಗೆ ಸೂಕ್ತ ಸಂಗಾತಿ ಆಗಲಾರಳು. ಅತ್ಯಂತ ವಿನಯದಿಂದ ಮೃದುವಾಗಿ ಮಾತನಾಡುವ ಯುವತಿ ನಿಮ್ಮ ಪಾಲಿಗೆ ಅದೃಷ್ಟವನ್ನು ತರುತ್ತಾಳೆ. ಮನೆಯಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ನೆಲೆಸುತ್ತದೆ.
ದುಷ್ಟ ಪುರುಷರೊಂದಿಗೆ ಸ್ನೇಹ ಹೊಂದಿರುವವಳನ್ನು ವರಿಸಬೇಡಿ ಅಂತಾ ವಿಷ್ಣುಪುರಾಣದಲ್ಲಿ ಹೇಳಲಾಗಿದೆ. ಯಾಕಂದ್ರೆ ಅವಳ ನಡವಳಿಕೆಯ ಮೇಲೂ ಅದು ಪರಿಣಾಮ ಬೀರುತ್ತದೆ.
ಹೆತ್ತವರ ಸಂಬಂಧಿಯಾಗಿದ್ದರೆ ಆ ಯುವತಿಯನ್ನು ವರಿಸುವುದು ಸೂಕ್ತವಲ್ಲ. ಯಾಕೆಂದರೆ ನಮ್ಮ ಶಾಸ್ತ್ರದ ಪ್ರಕಾರ ಒಂದೇ ಗೋತ್ರದವರು ಮದುವೆಯಾಗುವಂತಿಲ್ಲ. ಹತ್ತಿರದ ಸಂಬಂಧಿಗಳನ್ನು ವಿವಾಹವಾಗುವುದರಿಂದ ಆನುವಂಶಿಕ ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.