alex Certify ವಂಚಕಿ ಅರುಣಾ ಕುಮಾರಿಯ ಮುಖವಾಡ ಬಯಲು ಮಾಡಿದ ಉದ್ಯಮಿ ನಾಗವರ್ಧನ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಂಚಕಿ ಅರುಣಾ ಕುಮಾರಿಯ ಮುಖವಾಡ ಬಯಲು ಮಾಡಿದ ಉದ್ಯಮಿ ನಾಗವರ್ಧನ್​

ನಟ ದರ್ಶನ್​ ಹೆಸರಲ್ಲಿ ಕೋಟಿ ವಂಚನೆ ಯತ್ನ ಪ್ರಕರಣದಲ್ಲಿ ಇದೀಗ ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್​ ಕೂಡ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ನಾಗೇಂದ್ರ ಪ್ರಸಾದ್ ಹಾಗೂ ಉದ್ಯಮಿ ನಾಗವರ್ಧನ್​​​ ಅರುಣಾ ಕುಮಾರಿ ವಿರುದ್ಧ ಸ್ಪೋಟಕ ಮಾಹಿತಿಯನ್ನ ಬಾಯ್ಬಿಟ್ಟಿದ್ದಾರೆ.

5 ವರ್ಷದ ಹಿಂದೆ ನಾನು ಅರುಣಾ ಕುಮಾರಿ ಜೊತೆ ಮಾತನಾಡಿದ್ದೆ. ಅರುಣಾ ಕುಮಾರಿಯಿಂದ ಉದ್ಯಮಿ ನಾಗವರ್ಧನ್​ಗೆ ಮೋಸವಾಗಿದೆ. ಈ ಬಗ್ಗೆ ಇಂದು ಬೆಳಗ್ಗೆ ನನಗೆ ನಾಗವರ್ಧನ್​ ಮಾಹಿತಿ ನೀಡಿದ್ರು. ನಾಗವರ್ಧನ್​​ಗೆ 5 ವರ್ಷಗಳ ಹಿಂದೆ ಮೋಸವಾಗಿತ್ತು. 2015ರಲ್ಲಿ ನಾನೂ ಆಕೆಯ ಜೊತೆ ಮಾತನಾಡಿದ್ದೇನೆ. ಈ ಅರುಣಾ ಕುಮಾರಿ ಮುಖವನ್ನ ಬಯಲು ಮಾಡುವ ಸಲುವಾಗಿ ನಾವಿಲ್ಲಿ ಸೇರಿದ್ದೇವೆ ಎಂದು ಹೇಳಿದ್ರು.

ಇನ್ನು ಪ್ರಕರಣ ಸಂಬಂಧ ಇದೇ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಉದ್ಯಮಿ ನಾಗವರ್ಧನ್​, ನಾನು ಕೂಡ ಇದೇ ಮಹಿಳೆಯಿಂದ 2015ರ ಸೆಪ್ಟೆಂಬರ್​ ಅಂತ್ಯದಲ್ಲಿ ಮೋಸಗೊಳಗಾಗಿದ್ದೆ. 2016ರ ಫೆಬ್ರವರಿವರೆಗೆ ನನಗೆ ಈಕೆ ಜೊತೆ ಸಂಪರ್ಕ ಇತ್ತು. ಈ ಮಹಿಳೆ ನನ್ನನ್ನ ಫೇಸ್​ಬುಕ್​ ಮೂಲಕ ಪರಿಚಯ ಆಗಿದ್ದಳು. ನನಗೆ ಸಿನಿಮಾದಲ್ಲಿ ಆಫರ್​ ಕೋಡೋದಾಗಿ ಹೇಳಿದ್ದಳು. ನನ್ನ ತಂದೆ ಆಗರ್ಭ ಶ್ರೀಮಂತ ಎಂದೆಲ್ಲ ಹೇಳಿದ್ದಳು. ನಾನು ಕೂಡ ಈಕೆಯ ಮಾತನೆಲ್ಲ ನಂಬಿದ್ದೆ.

ತೆಲಗು ಸ್ಟಾರ್​ ಸಿನಿಮಾ ಕನ್ನಡದಲ್ಲಿ ರಿಮೇಕ್​ ಮಾಡೋಣ ಎಂದು ನನಗೆ ಹೇಳಿದ್ದರು. ಇದಾದ ಬಳಿಕ ಕನಕಪುರದಲ್ಲಿ ಒಂದು ಆಸ್ತಿ ಇದೆ. ಇದರ ಬೆಲೆ 10 ರಿಂದ 12 ಕೋಟಿ ಇದೆ. ಇದರ ನಿರ್ಮಾಣ ಕಾರ್ಯದ ಗುತ್ತಿಗೆಯನ್ನ ನಿಮಗೆ ನೀಡುತ್ತೇನೆ ಎಂದೂ ಹೇಳಿದ್ದಳು. ಇಷ್ಟು ದೊಡ್ಡ ಮೊತ್ತದ ಪ್ರಾಜೆಕ್ಟ್​ ಸಿಕ್ಕಿದ್ದರಿಂದ ಆಕೆಗೂ ಶೇರ್​ ಕೊಡಲು ನಿರ್ಧರಿಸಿದ್ದೆವು.

ಈಕೆ ನನ್ನ ಬಳಿ ನಂದಿತಾ ಎಂದು ಪರಿಚಯ ಮಾಡಿಕೊಂಡಿದ್ದಳು. ಈಗ ದರ್ಶನ್​ ಬಳಿ ನನ್ನ ಹೆಸರು ಅರುಣಾ ಕುಮಾರಿ ಎಂದಿದ್ದಾಳೆ. ನಿನ್ನೆಯ ವಿದ್ಯಾಮಾನವೆಲ್ಲ ನೋಡಿದ ಬಳಿಕ ನನಗಾದ ಮೋಸ ಇವರಿಗೆ ಆಗಬಾರದು ಎಂದು ನಾಗೇಂದ್ರ ಪ್ರಸಾದ್​ ಬಳಿ ಹೇಳಿಕೊಂಡೆ.

ಈಕೆ ನನ್ನ ಸ್ನೇಹಿತರೆನ್ನಲ್ಲ ದೂರ ಮಾಡುತ್ತಾ ಬಂದಳು. ಈಕೆ ಕೆಲಸವೇ ಅಂತದ್ದು. ಯಾರನ್ನ ಟಾರ್ಗೆಟ್​ ಮಾಡುತ್ತಾಳೋ ಅವರ ಸ್ನೇಹಿತರು ಹಾಗೂ ಕುಟುಂಬಸ್ಥರನ್ನ ದೂರ ಮಾಡುತ್ತಾಳೆ. ಹೀಗಾಗಿಯೇ ಅವಳು ಉಮಾಪತಿ ಹಾಗೂ ದರ್ಶನ್​ ನಡುವೆ ತಂದಿಟ್ಟು ತಮಾಷೆ ನೋಡಿದ್ದಾಳೆ. ನಾನು ನಾಗೇಂದ್ರ ಪ್ರಸಾದ್​ ನಡುವೆ ಮಾತು ನಿಲ್ಲೋದಕ್ಕೂ ಈಕೆಯೇ ಕಾರಣ.

ನನಗೆ ಈಕೆಯಿಂದ ಲಕ್ಷಗಟ್ಟಲೇ ವಂಚನೆ ಆಗಿದೆ. 15 ಲಕ್ಷ ರೂಪಾಯಿ ನಷ್ಟವಾಗಿದೆ. ನನ್ನ ಆಭರಣಗಳು ಸೇರಿ 6 ಲಕ್ಷಕ್ಕೂ ಅಧಿಕ ಹಣವನ್ನ ನನ್ನಿಂದ ವಂಚನೆ ಮಾಡಿದ್ದಾಳೆ. ಆಕೆ ಸುಳ್ಳು ಹೇಳೋವಾಗ ತೊದಲೋದಿಲ್ಲ. ಹೀಗಾಗಿ ನಾನು ಆಕೆಯನ್ನ ನಂಬಿದ್ದೆ. ನನ್ನ ಸ್ನೇಹಿತರಿಂದಲೂ ಈಕೆಗೆ ಹಣ ಕೊಡಿಸಿದ್ದೆ. ನನಗೆ ಜೀವ ಬೆದರಿಕೆ ಇದೆ ಎಂದು ಸುಳ್ಳು ಹೇಳಿ ಹಣ ಇಸಿದುಕೊಂಡಿದ್ದಳು.

ನಾನು ಕೊನೆಯ ಬಾರಿ ಫೆಬ್ರವರಿ 2016ರಲ್ಲಿ ಆಕೆಯನ್ನ ಭೇಟಿ ಮಾಡಿದ್ದೆ. ಆಕೆ ವಂಚಕಿ ಎಂದು ತಿಳಿದು ಬಳಿಕ ಆಕೆಯನ್ನ ದೂರ ಇಟ್ಟಿದ್ದೆ. ನನ್ನ ಪತ್ನಿ ಈಕೆ ವಿರುದ್ಧ ಬ್ಯಾಟರಾಯನಪುರದಲ್ಲಿ ದೂರು ನೀಡಿದ್ದರು. ನಾನು ಈಕೆಗೆ ರಕ್ಷಣೆ ನೀಡುವ ಸಲುವಾಗಿ 3 ತಿಂಗಳು ಮನೆಯಿಂದ ದೂರವಿದ್ದೆ. ಹೀಗಾಗಿ ನಮ್ಮ ಮನೆಯಲ್ಲಿ ಆತಂಕ ಸೃಷ್ಟಿಯಾಗಿತ್ತು. ಹೀಗಾಗಿ ನಾನು ದರ್ಶನ್​, ಉಮಾಪತಿಗೆ ಕರೆ ಮಾಡಿ ಈಕೆಯ ವಂಚನೆ ಬಗ್ಗೆ ಮಾಹಿತಿ ನೀಡಿದ್ದೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...