ಅಡುಗೆ ಮನೆಯಲ್ಲಿ ಈರುಳ್ಳಿ ಇರಲೇಬೇಕು. ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್ ನಿಂದ ಹಿಡಿದು ಪಾನಿಪುರಿಯವರೆಗೆ ಸ್ಪೈಸಿ ಅಡುಗೆಗೆ ಈರುಳ್ಳಿ ಬಳಸಲಾಗುತ್ತದೆ. ಈರುಳ್ಳಿ ಊಟದ ರುಚಿ ಹೆಚ್ಚಿಸುವ ಜೊತೆಗೆ ಅಡುಗೆ ಮನೆಯ ಸೌಂದರ್ಯ ಹೆಚ್ಚಿಸಲು ಸಹಾಯಕ. ಲೋಹದ ವಸ್ತುಗಳನ್ನು ಶುಚಿಗೊಳಿಸುವ ಕೆಲಸವನ್ನು ಈರುಳ್ಳಿ ಮಾಡುತ್ತದೆ.
ಅಡಿಗೆ ಮನೆಯ ಚಿಮಣಿ ಸ್ವಚ್ಛಗೊಳಿಸಲು ಈರುಳ್ಳಿ ರಸದ ಜೊತೆ ಅಡಿಗೆ ಸೋಡಾ ಮಿಶ್ರಣ ಮಾಡಿ. ಇದನ್ನು ಚಿಮಣಿಗೆ ಹಚ್ಚಿ ತಿಕ್ಕಬೇಕು. ಕೆಲವೇ ನಿಮಿಷದಲ್ಲಿ ಚಿಮಣಿ ಫಳಫಳ ಹೊಳೆಯುತ್ತದೆ.
ಕಬ್ಬಿಣದ ಚಾಕು ಅಥವಾ ಯಾವುದರ ಮೇಲಾದರೂ ತುಕ್ಕು ಇದ್ದರೆ, ಅದರ ಮೇಲೆ ಈರುಳ್ಳಿ ಕಟ್ ಮಾಡಿ ಉಜ್ಜಿರಿ. ಕೇವಲ 5 ನಿಮಿಷಗಳಲ್ಲಿ ತುಕ್ಕು ಮಾಯ.
ಲೋಹದ ಪಾತ್ರೆ ಸ್ವಚ್ಛಗೊಳಿಸಲು, ನೀರಿಗೆ ಕತ್ತರಿಸಿದ ಈರುಳ್ಳಿ ಹಾಕಿ. ನಂತರ ಈ ಈರುಳ್ಳಿ ಮಿಶ್ರಣವನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಲೋಹದ ಪಾತ್ರೆ ಮೇಲೆ ರಬ್ ಮಾಡಿ ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ಪಾತ್ರೆಗಳು ಹೊಳೆಯುವ ಜೊತೆಗೆ ಸ್ವಚ್ಛವಾಗುತ್ತವೆ.