alex Certify ಲೈಸೆನ್ಸ್ ಇಲ್ಲದೇ ಬಸ್ ಓಡಿಸಿದ ಬಿಜೆಪಿ ಶಾಸಕ; ಕೇಸ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಸೆನ್ಸ್ ಇಲ್ಲದೇ ಬಸ್ ಓಡಿಸಿದ ಬಿಜೆಪಿ ಶಾಸಕ; ಕೇಸ್ ದಾಖಲು

ದಾವಣಗೆರೆ: ಲೈಸೆನ್ಸ್ ಇಲ್ಲದೇ ಬಸ್ ಓಡಿಸಿದ್ದ ಮಾಜಿ ಸಚಿವ, ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಾವಣಗೆರೆ ಜಿಲ್ಲೆಯ ಬೈರನಹಳ್ಳಿ ಗ್ರಾಮದಲ್ಲಿ ಬಸ್ ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದರು. ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಶಾಸಕರ ಬಳಿ ವಿದ್ಯಾರ್ಥಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಖುದ್ದು ಶಾಸಕ ಎಂ.ಪಿ. ರೇಣುಕಾಚಾರ್ಯ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದ್ದರಲ್ಲದೇ ಕೆ ಎಸ್ ಆರ್ ಟಿ ಸಿ ಬಸ್ ತಾವೇ ಚಲಾಯಿಸಿ ಗಮನ ಸೆಳೆದಿದ್ದರು.

ಗ್ರಾಮಕ್ಕೆ ಬಸ್ ಓಡಿಸಿಕೊಂಡು ಬಂದ ಶಾಸಕರನ್ನು ಕಂಡು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಶಾಸಕರು ಬಸ್ ಓಡಿಸಿ ಗಮನ ಸೆಳೆದಿದ್ದರು. ಲೈಸನ್ಸ್ ಇಲ್ಲದೇ ಶಾಸಕ ರೆಣುಕಾಚಾರ್ಯ ಬಸ್ ಓಡಿಸಿದ್ದಕ್ಕಾಗಿ ಇದೀಗ ಶಾಸಕರ ವಿರುದ್ಧ ಕೇಸ್ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...