alex Certify ಲೈಂಗಿಕ ವ್ಯಸನಿಯಾಗಿದ್ದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡ ಸುಪ್ರಸಿದ್ಧ ನಟ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕ ವ್ಯಸನಿಯಾಗಿದ್ದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡ ಸುಪ್ರಸಿದ್ಧ ನಟ…..!

ಆಸ್ಕರ್​ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವ ನಟ ಜೇಮ್ಸ್​ ಫ್ರಾಂಕೋ ಈ ಹಿಂದೆ ತಾವು ನಡೆಸುತ್ತಿದ್ದ ನಟನಾ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಮಲಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಲೈಂಗಿಕತೆಯ ದಾಸನಾಗಿದ್ದ ತಾವು ಇದರಿಂದ ಹೊರಬರಲು ಸಾಕಷ್ಟು ಹೋರಾಡಿದ್ದಾಗಿ ಹೇಳಿದ್ದಾರೆ.

ದಿ ಜೆಡ್​ ಕಾಗಲ್​ ಪಾಡ್​ಕ್ಯಾಸ್ಟ್​ ಆಯ್ದ ಭಾಗಗಳಲ್ಲಿ 43 ವರ್ಷದ ಜೇಮ್ಸ್​ ಫ್ರಾಂಕೋ ತಾವು ನಟನಾ ಶಾಲೆಯನ್ನು ನಡೆಸುತ್ತಿದ್ದಾಗ ಅಲ್ಲಿನ ವಿದ್ಯಾರ್ಥಿನಿಯರ ಜೊತೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ಹೇಳಿದ್ದಾರೆ. ಮಾತ್ರವಲ್ಲದೇ ಈ ರೀತಿ ಮಾಡಿದ್ದು ತಪ್ಪು ಎಂದೂ ಒಪ್ಪಿಕೊಂಡಿದ್ದಾರೆ. ಲೈಂಗಿಕ ಉದ್ದೇಶಕ್ಕೆ ಮಹಿಳೆಯರನ್ನು ಸೆಳೆಯಲೆಂದೇ ತಾವು ಈ ಶಾಲೆಯನ್ನು ಆರಂಭಿಸಿರಲಿಲ್ಲ ಎಂದು ಫ್ರಾಂಕೋ ಹೇಳಿದ್ದಾರೆ.

ಆ ಸಮಯದಲ್ಲಿ ನನಗೆ ನನ್ನ ಆಲೋಚನೆಗಳಿಗೆ ಸರಿ ಎನಿಸಿದ್ದನ್ನು ಮಾಡಿಬಿಡುತ್ತಿದ್ದೆ ಎಂದು ಜೇಮ್ಸ್​ ಫ್ರಾಂಕೋ ಹೇಳಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಲಾಸ್​ ಏಂಜಲಿಸ್​ ಟೈಮ್ಸ್​ನಲ್ಲಿ ಐವರು ಮಹಿಳೆಯರು ಫಾಂಕೋ ವಿರುದ್ಧ ಅನುಚಿತ ವರ್ತನೆ ಆರೋಪ ಹೊರಿಸಿದ್ದಾರೆ ಎಂದು ವರದಿ ಪ್ರಕಟಿಸಿತ್ತು. ತಮ್ಮ ವಿರುದ್ಧ ಹೊರಿಸಲಾದ ಈ ಆರೋಪಗಳ ವಿರುದ್ಧ ಫ್ರಾಂಕೋ ಮೊದಲ ಬಾರಿಗೆ ವಿಸ್ತೃತ ಕಮೆಂಟ್​ ನೀಡಿದಂತಾಗಿದೆ.

2019ರ ಅಕ್ಟೋಬರ್​ ತಿಂಗಳಿನಲ್ಲಿ ಇಬ್ಬರು ಮಹಿಳೆಯರು ಫ್ರಾಂಕೋ ವಿರುದ್ಧ ಸಿವಿಲ್​ ಮೊಕದ್ದಮೆ ಹೂಡಿದ್ದರು. ಯುವತಿಯರನ್ನು ಅವರು ಲೈಂಗಿಕ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...