alex Certify ಲೈಂಗಿಕತೆ ಉದ್ರೇಕಿಸುತ್ತದೆಂದು ವಿದ್ಯಾರ್ಥಿನಿಯರಿಗೆ ಜುಟ್ಟು ಕಟ್ಟಲು ನಿಷೇಧ ಹೇರಿದೆ ಈ ದೇಶ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಂಗಿಕತೆ ಉದ್ರೇಕಿಸುತ್ತದೆಂದು ವಿದ್ಯಾರ್ಥಿನಿಯರಿಗೆ ಜುಟ್ಟು ಕಟ್ಟಲು ನಿಷೇಧ ಹೇರಿದೆ ಈ ದೇಶ….!

ಮಹಿಳೆಯ ಕುತ್ತಿಗೆಯು ಪುರುಷರಲ್ಲಿ ಲೈಂಗಿಕತೆಯನ್ನು ಪ್ರಚೋದಿಸುತ್ತದೆ ಎಂದು ಜಪಾನ್​ನ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಜುಟ್ಟು ಕಟ್ಟುವುದಕ್ಕೆ ನಿಷೇಧವನ್ನು ಹೇರಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಅಲ್ಲದೇ ಹೆಣ್ಣು ಮಕ್ಕಳಿಗೆ ಕೇವಲ ಬಿಳಿ ಬಣ್ಣದ ಒಳ ಉಡುಪುಗಳನ್ನು ಹಾಕಿಕೊಂಡು ಬರುವಂತೆಯೂ ಹೇಳಲಾಗಿದೆ.

ಜಪಾನಿನ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಜುಟ್ಟು ಹಾಕಿಕೊಳ್ಳುವುದಕ್ಕೆ ನಿಷೇಧವು ‘ಬುರಾಕು ಕೊಸೊಕು’ – ಕಠಿಣ ನಿಯಮಗಳು ದೊಡ್ಡ ಸಂಸ್ಕೃತಿಯ ಭಾಗವಾಗಿದೆ.

ಮಾಜಿ ಶಾಲಾ ಶಿಕ್ಷಕರಾದ ಮೊಟೊಕಿ ಸುಗಿಮಿಯಾ, ಹುಡುಗರು ಹುಡುಗಿಯರನ್ನು ನೋಡುತ್ತಾರೆ ಎಂದು ಅವರು ಚಿಂತೆ ಮಾಡುತ್ತಾರೆ. ಇದೇ ಕಾರಣಕ್ಕೆ ಹುಡುಗಿಯರಿಗೆ ಬಿಳಿ ಬಣ್ಣದ ಒಳ ಉಡುಪುಗಳನ್ನೇ ಧರಿಸುವಂತೆ ಹೇಳಲಾಗಿದೆ ಎಂದು ಹೇಳಿದರು.

ಆದರೆ ನಾನು ಈ ನಿಯಮಗಳ ವಿರೋಧವಾಗಿದ್ದೇನೆ. ಆದರೆ ಈ ರೀತಿ ವಿರೋಧಿಸುತ್ತಿರುವವರ ಸಂಖ್ಯೆಯು ತುಂಬಾನೇ ಕಡಿಮೆಯಿದೆ. ವಿದ್ಯಾರ್ಥಿಗಳಿಗೆ ಈ ನಿಯಮಗಳನ್ನು ಒಪ್ಪಿಕೊಳ್ಳದ ಹೊರತು ಬೇರೆ ದಾರಿಯಿಲ್ಲ. ನಾನು ಐದು ವಿಭಿನ್ನ ಶಾಲೆಗಳಲ್ಲಿ 11 ವರ್ಷಗಳ ಕಾಲ ಬೋಧನೆ ಮಾಡಿದ್ದೇನೆ. ಇಲ್ಲಿ ಎಲ್ಲ ಕಡೆಯಲ್ಲಿಯೂ ವಿದ್ಯಾರ್ಥಿನಿಯರಿಗೆ ಜುಟ್ಟು ಧರಿಸಲು ನಿರ್ಬಂಧಿಸಲಾಗಿದೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...