ಮಹಿಳೆಯ ಕುತ್ತಿಗೆಯು ಪುರುಷರಲ್ಲಿ ಲೈಂಗಿಕತೆಯನ್ನು ಪ್ರಚೋದಿಸುತ್ತದೆ ಎಂದು ಜಪಾನ್ನ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಜುಟ್ಟು ಕಟ್ಟುವುದಕ್ಕೆ ನಿಷೇಧವನ್ನು ಹೇರಿದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಅಲ್ಲದೇ ಹೆಣ್ಣು ಮಕ್ಕಳಿಗೆ ಕೇವಲ ಬಿಳಿ ಬಣ್ಣದ ಒಳ ಉಡುಪುಗಳನ್ನು ಹಾಕಿಕೊಂಡು ಬರುವಂತೆಯೂ ಹೇಳಲಾಗಿದೆ.
ಜಪಾನಿನ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಜುಟ್ಟು ಹಾಕಿಕೊಳ್ಳುವುದಕ್ಕೆ ನಿಷೇಧವು ‘ಬುರಾಕು ಕೊಸೊಕು’ – ಕಠಿಣ ನಿಯಮಗಳು ದೊಡ್ಡ ಸಂಸ್ಕೃತಿಯ ಭಾಗವಾಗಿದೆ.
ಮಾಜಿ ಶಾಲಾ ಶಿಕ್ಷಕರಾದ ಮೊಟೊಕಿ ಸುಗಿಮಿಯಾ, ಹುಡುಗರು ಹುಡುಗಿಯರನ್ನು ನೋಡುತ್ತಾರೆ ಎಂದು ಅವರು ಚಿಂತೆ ಮಾಡುತ್ತಾರೆ. ಇದೇ ಕಾರಣಕ್ಕೆ ಹುಡುಗಿಯರಿಗೆ ಬಿಳಿ ಬಣ್ಣದ ಒಳ ಉಡುಪುಗಳನ್ನೇ ಧರಿಸುವಂತೆ ಹೇಳಲಾಗಿದೆ ಎಂದು ಹೇಳಿದರು.
ಆದರೆ ನಾನು ಈ ನಿಯಮಗಳ ವಿರೋಧವಾಗಿದ್ದೇನೆ. ಆದರೆ ಈ ರೀತಿ ವಿರೋಧಿಸುತ್ತಿರುವವರ ಸಂಖ್ಯೆಯು ತುಂಬಾನೇ ಕಡಿಮೆಯಿದೆ. ವಿದ್ಯಾರ್ಥಿಗಳಿಗೆ ಈ ನಿಯಮಗಳನ್ನು ಒಪ್ಪಿಕೊಳ್ಳದ ಹೊರತು ಬೇರೆ ದಾರಿಯಿಲ್ಲ. ನಾನು ಐದು ವಿಭಿನ್ನ ಶಾಲೆಗಳಲ್ಲಿ 11 ವರ್ಷಗಳ ಕಾಲ ಬೋಧನೆ ಮಾಡಿದ್ದೇನೆ. ಇಲ್ಲಿ ಎಲ್ಲ ಕಡೆಯಲ್ಲಿಯೂ ವಿದ್ಯಾರ್ಥಿನಿಯರಿಗೆ ಜುಟ್ಟು ಧರಿಸಲು ನಿರ್ಬಂಧಿಸಲಾಗಿದೆ ಎಂದು ಹೇಳಿದರು.