alex Certify ಲೂಲು ಮಾಲ್​ನಲ್ಲಿ ಹನುಮಾನ್​ ಚಾಲೀಸ ಪಠಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೂಲು ಮಾಲ್​ನಲ್ಲಿ ಹನುಮಾನ್​ ಚಾಲೀಸ ಪಠಣ….!

ಮಾಲ್​ನಲ್ಲಿ ನಮಾಝ್​ಗೆ ಅವಕಾಶ ನೀಡುವುದನ್ನು ವಿರೋಧಿಸಿ ಹನುಮಾನ್​ ಚಾಲೀಸಾ ಪಠಿಸಲು ಯತ್ನಿಸಿದ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆದ ಘಟನೆ ಲಕ್ನೋದಲ್ಲಿ ನಡೆದಿದೆ.

ಪೊಲೀಸ್​ ಮೂಲಗಳ ಪ್ರಕಾರ, ರಾಷ್ಟ್ರೀಯ ಹಿಂದೂ ಸಂರಕ್ಷಕ ಸೇನೆಯ ಸದಸ್ಯರನ್ನು ಮಾಲ್​ಗೆ ಪ್ರವೇಶ ನಿರಾಕರಿಸಿದ ನಂತರ ಅದರ ನಾಯಕ ಆದಿತ್ಯ ಮಿಶ್ರಾ ಪೊಲೀಸರೊಂದಿಗೆ ಜಟಾಪಟಿಗಿಳಿದರು.

ಕೇಸರಿ ಧ್ವಜಗಳನ್ನು ಹಿಡಿದಿದ್ದ ಕೇಸರಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು. ಈ ವೇಳೆ ಕಾರ್ಯಕರ್ತರು ಜೈ ಶ್ರೀ ರಾಮ್​ ಎಂದು ಘೋಷಣೆ ಕೂಗಿದರು ಮತ್ತು ನಂತರ ಸಂಘಟನೆಯ 25 ಸದಸ್ಯರನ್ನು ಬಂಧಿಸಲಾಯಿತು.

ಇದಕ್ಕೂ ಮುನ್ನ ಇಬ್ಬರು ಯುವಕರು ಮಾಲ್​ನಲ್ಲಿ ಹನುಮಾನ್​ ಚಾಲೀಸಾ ಪಠಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಈ ಮಾಲ್​ ಉತ್ತರ ಭಾರತದಲ್ಲೇ ಅತಿ ದೊಡ್ಡ ಮಾಲ್​ ಎಂದು ಹೇಳಲಾಗಿದೆ. ಮಾಲ್​ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲ್​ನಲ್ಲಿ ನಮಾಜ್​ಗೆ ಅವಕಾಶ ನೀಡಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ಹಿಂದೂ ಮಹಾಸಭಾ ಪೊಲೀಸರಿಗೆ ದೂರು ನೀಡಿತ್ತು.

ಒಂದು ವೇಳೆ ನಮಾಜ್​ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವು ಹನುಮಾನ್​ ಚಾಲೀಸಾವನ್ನು ಪಠಿಸುತ್ತೇವೆ ಎಂದು ಸವಾಲು ಹಾಕಿದ್ದರು.

ಈ ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮಾಲ್​ ಆಡಳಿತ ಮಂಡಳಿ ತಿಳಿಸಿದೆ. “ನಾವು ತನಿಖೆ ನಡೆಸುತ್ತಿದ್ದೇವೆ.ವಿಷಯ…ನಮಾಜ್​ ಮಾಡುವವರು ಉದ್ಯೋಗಿಗಳೋ ಅಥವಾ ಹೊರಗಿನವರೋ ಎಂದು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ವಕ್ತಾರರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...