
ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸ್ಮಿತ್ ಲಿಫ್ಟ್‌ನಲ್ಲೇ ಪರದಾಡುವಂತಾಯಿತು. ಆಸೀಸ್ ತಂಡದ ಆಟಗಾರ ಮಾರ್ನಸ್ ಲ್ಯಾಬುಸ್ಚಾಗ್ನೆ ಸ್ಮಿತ್ ಅವರನ್ನು ರಕ್ಷಿಸಲು ಪ್ರಯತ್ನಪಟ್ಟರೂ, ಯಾವುದೇ ಪ್ರಯೋಜನವಾಗಿಲ್ಲ. ಅಂತಿಮವಾಗಿ ಎಲಿವೇಟರ್ ಬಾಗಿಲು ತೆರೆಯುವ ತಂತ್ರಜ್ಞನನ್ನು ಕರೆಸಲಾಯಿತು. ಹೀಗಾಗಿ ಸುಮಾರು ಒಂದು ಗಂಟೆಗಳ ನಂತರ ಲಿಫ್ಟ್ ನಿಂದ ಸ್ಮಿತ್ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.
ಇನ್ನು ಈ ಎಲಿವೇಟರ್ ನಲ್ಲಿ ಸಿಲುಕಿಕೊಂಡ ಬಗ್ಗೆ ಆಸೀಸ್ ಆಟಗಾರ ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇನ್ನೇನು ತನ್ನ ಮಹಡಿ ಬಂತು ಎನ್ನುವಾಗ ಎಲಿವೇಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಬಾಗಿಲು ಓಪನ್ ಆಗಲಿಲ್ಲ. ಒಳಗಿಂದ ತಾನು ಹೊರಗಿಂದ ಮಾರ್ನಸ್ ಬಾಗಿಲನ್ನು ಹಿಡಿದು ತೆರೆಯಲು ಪ್ರಯತ್ನಿಸಿದ್ರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ವಿವರಿಸಿದ್ದಾರೆ.
ಅಂತಿಮವಾಗಿ ತಂತ್ರಜ್ಞ ಬಂದು ಬಾಗಿಲು ತೆರೆಯುವಲ್ಲಿ ಯಶಸ್ವಿಯಾದಾಗ, ಆಸೀಸ್ ತಂಡದ ಸಹ ಆಟಗಾರರು ಚಪ್ಪಾಳೆ ತಟ್ಟಿದ್ದಾರೆ. ಆದರೆ, 55 ನಿಮಿಷಗಳ ಹೋರಾಟ ಮಾತ್ರ ಕಠಿಣ ಅನುಭವವಾಗಿತ್ತು ಎಂದು ಹೇಳಿದ್ದಾರೆ.