
ಹೆಣ್ಣುಮಕ್ಕಳಿಗೆ ಲಿಪ್ ಸ್ಟಿಕ್ ಎಂದರೆ ಇಷ್ಟ. ಆದರೆ ಇದರ ತಯಾರಿಗೆ ಯಾವೆಲ್ಲ ವಸ್ತುಗಳನ್ನು ಬಳಸುತ್ತಾರೆ ಎಂಬುದು ನಿಮಗೆ ಗೊತ್ತೇ…?
ಲಿಪ್ ಸ್ಟಿಕ್ ತಯಾರಿಗೆ ಮೆಣಸಿನಕಾಯಿ ಬಳಸುತ್ತಾರೆ. ಒಲೆಯೋರೆಸಿನ್ ಎಂಬ ತೈಲವನ್ನು ಮೆಣಸಿನಕಾಯಿಯಿಂದಲೇ ತಯಾರಿಸಲಾಗುತ್ತದೆ. ಇದರ ತಯಾರಿ ಬಲು ದುಬಾರಿ ಹಾಗೂ ಸುದೀರ್ಘ. ಒಂದು ಟನ್ ಬ್ಯಾಡಗಿ ಮೆಣಸಿನಿಂದ 50 ಲೀಟರ್ ತೈಲ ತಯಾರಿಸಬಹುದಷ್ಟೇ.
ರಸ್ತೆಗೆ ಬಳಸುವ ಟಾರ್ ಅನ್ನು ಕಡಿಮೆ ಪ್ರಮಾಣದಲ್ಲಿ ಲಿಪ್ ಸ್ಟಿಕ್ ಗೆ ಬಳಸಲಾಗುತ್ತದೆ. ಇದನ್ನು ಡಾರ್ಕ್ ಶೇಡ್ ಗಾಗಿ ಬಳಸಲಾಗುತ್ತದೆಯಾದರೂ ಇದನ್ನು ಹೆಚ್ಚು ಬಳಸಿದರೆ ಕ್ಯಾನ್ಸರ್ ಮೊದಲಾದ ಕಾಯಿಲೆಗೆ ಕಾರಣವಾಗಬಹುದು. ಹಾಗಾಗಿ ಇದನ್ನು ಇತಿಮಿತಿಯಲ್ಲಿ ಬಳಸುವುದು ಉತ್ತಮ.
ಕೊಚಿನೆಲ್ ಎಂಬ ಕೀಟದಿಂದ ತಯಾರಿಸುವ ಕೆಂಬಣ್ಣವನ್ನೂ ಇದಕ್ಕಾಗಿ ಬಳಸಲಾಗುತ್ತದೆ. ಇದನ್ನು ಮೊದಲು ಬಿಸಿ ನೀರಿನಲ್ಲಿ ಪುಡಿಮಾಡಿ ಬಣ್ಣವನ್ನು ತಯಾರಿಸಲಾಗುತ್ತದೆ. ಮೀನಿನ ತ್ವಚೆಯ ಮೇಲೆ ಹೊಳೆಯುವ ಭಾಗವನ್ನು ಲಿಪ್ ಸ್ಟಿಕ್ ಹೊಳೆಯಲೆಂದು ಬಳಸುತ್ತಾರೆ.
ಯಾವುದಾದರೊಂದು ರೂಪದಲ್ಲಿ ಸೀಸವನ್ನೂ ಲಿಪ್ ಸ್ಟಿಕ್ ಗೆ ಬಳಸುತ್ತಾರೆ. ಅದು ನೇರವಾಗಿ ಮಾತ್ರ ಅಲ್ಲ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ.